‘ದಾರಿ ತಪ್ಪಿಸುವ ಗಿಡʼಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ
ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ
ಹೆಗ್ಗೋಡಿನ ಪ್ರಾಣೇಶಾಚಾರ್ಯ, ನಾರಣಪ್ಪ: ಟಿ.ಎನ್. ಸೀತಾರಾಮ್ ಬದುಕಿನ ಪುಟಗಳು
ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು. ಎನ್‌ಎಸ್‌ಡಿ ಎಂದರೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ.
ಟಿ.ಎನ್. ಸೀತಾರಾಮ್ ಅವರ ಆತ್ಮಕಥನ “ಬದುಕಿನ ಪುಟಗಳು” ಕೃತಿಯ ಕೆಲವು ಪುಟಗಳು
ಜೀವಜಾಲದ ಪ್ರೋಗ್ರಾಮಿಂಗ್‌ನ ವಿಸ್ಮಯ: ಸತೀಶ್ ತಿಪಟೂರು ಬರಹ
ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ
ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ
ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ.
ಬಂಗಾಳಿಯ ಮಾನದಾ ದೇವಿ ಆತ್ಮಕಥನ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನಾಗ ಎಚ್ ಹುಬ್ಳಿ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಆತ್ಮಕಥನದ ಪುಟಗಳು
ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!
ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆತ್ಮಕಥನ “ದಿಟದ ದೀವಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ
ವಸಂತಸೇನೆ ಎಂಬ ನನ್ನ ಮುತ್ತಜ್ಜಿಯ ಕಥೆ: ಸತೀಶ್ ತಿಪಟೂರು ಬರಹ
ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ
ಡಂಕಲ್‌ಪೇಟೆಯ ಒಳ-ಹೊರಗೆ: ಜಿ. ಪಿ.ಬಸವರಾಜು ಮಾತುಗಳು
ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್‌ಪೇಟೆಯಲ್ಲಿಯೇ. ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.
ವೀರೇಂದ್ರ ರಾವಿಹಾಳ್ ಕಥಾ ಸಂಕಲನ “ಡಂಕಲ್‌ಪೇಟೆ”ಗೆ ಜಿ.ಪಿ. ಬಸವರಾಜು ಬರೆದ ಮುನ್ನುಡಿ
ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ: ಸುಧಾ ಆಡುಕಳ ಮಾತುಗಳು
ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.
ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ
ಹಳ್ಳಿಗಾಡಿನ ಹೊಸ ಕತೆಗಳು: ಸಂಗೀತ ರವಿರಾಜ್ ಬರಹ
ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ.
ಮಲ್ಲಿಕಾರ್ಜುನ ತೂಲಹಳ್ಳಿ ಕಥಾ ಸಂಕಲನ “ಅಗಸ್ತ್ಯ ನಕ್ಷತ್ರ” ಕುರಿತು ಸಂಗೀತಾ ರವಿರಾಜ್ ಚೆಂಬು ಬರಹ









