ವಿಜ್ಞಾನದೊಂದಿಗೆ ಅಧ್ಯಾತ್ಮವೂ ಮಿಳಿತವಾಗುವ ಹೊತ್ತು…
ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ
ನಡು ಮಧ್ಯಾಹ್ನದ ಕಣ್ಣಿನ ಹೊಳಪು…
ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”
ಆಶಾ ಜಗದೀಶ್ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಸಂಗೀತ ರವಿರಾಜ್ ಚೆಂಬು ಬರಹ
ಎಲ್ಲ ಆಯಾಮಗಳಲ್ಲೂ ಸಮೃದ್ಧವಾದ “ಎತ್ತರ”
ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ.
ಇಂದ್ರಕುಮಾರ್ ಎಚ್.ಬಿ. ಯವರ “ಎತ್ತರ” ಕಾದಂಬರಿಯ ಕುರಿತು ಮಮತಾ ಆರ್. ಬರಹ
ಹೆಣ್ತನದ ಒಳಬೇಗುದಿಯನ್ನು ಬಿಂಬಿಸುವ ಪುಟ್ಟಮ್ಮಯ್ಯ
ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು.
ಪ್ರೊ. ಕಟಾವೀರನಹಳ್ಳಿ ನಾಗರಾಜು ಬರೆದ ಕಾದಂಬರಿ “ಪುಟ್ಟಮ್ಮಯ್ಯ” ಕುರಿತು ಪ.ನಾ. ಹಳ್ಳಿ ಹರೀಶ್ ಕುಮಾರ್ ಬರಹ
ಕನ್ನಡ ಶಾಲೆಯೊಂದರ ಸುಂದರ ಕಥಾನಕ
ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ.
ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಕೃತಿಯ ಕುರಿತು ಸದಾನಂದ ನಾರಾವಿ ಬರಹ
ಕೊನೆ ಮೊದಲಿಲ್ಲದ ದಾರಿಗಳೊಳಗೆ
ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ.
ಕೆ. ಎನ್. ಲಾವಣ್ಯಪ್ರಭ ಕವನ ಸಂಕಲನ “ಸ್ಪರ್ಶ ಶಿಲೆ”ಯ ಕುರಿತು ಸಂಗೀತ ರವಿರಾಜ್ ಚೆಂಬು ಬರಹ
‘ಮುಂಬಯಿ ಕನ್ನಡ ಲೋಕʼದ ಅನಾವರಣ
ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.
ಡಾ. ಕೆ. ರಘುನಾಥ್ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್ ಬರಹ
ತೆರೆಮರೆಯ ಅಂತರಂಗದ ಕಥೆ…
ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..
ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ
ಬದುಕೆಂದರೆ ಹೀಗೇನೆ….
ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು.
ನಗೋಲತೆ ಬರೆದ “ಬೆದ್ಲು ಬದ್ಕು” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ









