ಸಿಕಾಡ- ಕೀಟಲೋಕದ ಸಂಗೀತಸಾಮ್ರಾಟ
ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ.
ಕ್ಷಮಾ ವಿ. ಭಾನುಪ್ರಕಾಶ್ ಬರೆದ ವಿಜ್ಞಾನ ಲೇಖನಗಳ ಸಂಕಲನ “ಜೀವಿವಿಜ್ಞಾನ”ದಿಂದ ಆಯ್ದ ಲೇಖನ ನಿಮ್ಮ ಓದಿಗೆ
ಆ ಹೂವಿನಿಂದಲೆ ಇಷ್ಟೆಲ್ಲ ಆಯಿತು ಅನ್ನಬಹುದೆ. ಗೊತ್ತಿಲ್ಲ!
ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ.
ಇಂದ್ರಕುಮಾರ್ ಎಚ್.ಬಿ. ಹೊಸ ಕಾದಂಬರಿ “ಎತ್ತರ”ದ ಕೆಲ ಪುಟಗಳು ನಿಮ್ಮ ಓದಿಗೆ
ವಾಸ್ತವದ ಹಂದರವನ್ನು ತೆರೆದಿಡುವ ‘ನೋಟ್ ಬುಕ್’
ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.
ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ “ನೋಟ್‌ಬುಕ್” ಕುರಿತು ಪ.ನಾ. ಹಳ್ಳಿ ಹರೀಶ್ ಕುಮಾರ್ ಬರಹ
ಹಿಂದಣ ಕಾಲಕ್ಕೆ ಎಳೆದೊಯ್ಯುವ ‘ಕಥಾಗತ’
ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ.
ನವೀನ ಗಂಗೋತ್ರಿ ಕಥಾಸಂಕಲನ “ಕಥಾಗತ”ಕ್ಕೆ ಸದ್ಯೋಜಾತ ಭಟ್ಟ ಬರೆದ ಮುನ್ನುಡಿ
ಹೆಣ್ಣು ಮಾಡುವುದೆಲ್ಲ ಕಾಯಕವೇ
ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ
ಹಾರುವ ತಟ್ಟೆ…
ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? `ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು.
ಜೋಗಿ ಸಂಪಾದಿಸಿದ “ವೈಯೆನ್ಕೆ UNLIMITED ವಾಚಿಕೆ” ಕೃತಿಯ ಆಯ್ದ ಬರಹ ನಿಮ್ಮ ಓದಿಗೆ
ನೀಲಾಕಾಶದ ನಿಹಾರಿಕೆಗಳ ನೋವು ತಿಳಿದಿರಲಿ…
ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್ ಪಾಷಾ ತೋರಿದ್ದಾರೆ.
ಚಾಂದ್ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ
ಸದಾ ಉಳಿಯುವ ಚಡಪಡಿಕೆಯ ಕಥೆಗಳು…
ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.
ವಿನಾಯಕ ಅರಳಸುರಳಿ ಕಥಾಸಂಕಲನ “ಮರ ಹತ್ತದ ಮೀನು”ಕ್ಕೆ ಎ.ಆರ್. ಮಣಿಕಾಂತ್ ಬರೆದ ಮುನ್ನುಡಿ
ತಳಮಳಗಳ `ಮೌನದೊಡಲ ಮಾತು’
ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ.
ಅಂಬಮ್ಮ ಪ್ರತಾಪ್ ಸಿಂಗ್ ಗಜಲ್ ಸಂಕಲನ “ಮೌನದೊಡಲ ಮಾತು” ಕುರಿತು ಮಂಡಲಗಿರಿ ಪ್ರಸನ್ನ ಬರಹ









