Advertisement

ಪುಸ್ತಕ ಸಂಪಿಗೆ

ಅಪೂರ್ಣವಲ್ಲ… ಪೂರ್ಣತೆಯೆಡೆಗೆ ಸಾಗುವ ದಾರಿ

ಅಪೂರ್ಣವಲ್ಲ… ಪೂರ್ಣತೆಯೆಡೆಗೆ ಸಾಗುವ ದಾರಿ

ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.
ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್‌ ಅವರ ಬರಹ

read more
ಉತ್ತಮ ಪೂರ್ವಜರಾಗುವುದು ಹೇಗೆ?

ಉತ್ತಮ ಪೂರ್ವಜರಾಗುವುದು ಹೇಗೆ?

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

read more
ದಿನ ದಿನದ ಕಥನ

ದಿನ ದಿನದ ಕಥನ

ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು.
ವಿಜಯಾ ಮೋಹನ್‌ ಕಥಾ ಸಂಕಲನ “ಮೇವು”ಗೆ ಡಾ. ಸಬಿತಾ ಬನ್ನಾಡಿ ಬರೆದ ಮುನ್ನುಡಿ

read more
“ದೀಡೆಕರೆ ಜಮೀನು”ನಲ್ಲಿರುವ ಸಂಕಟದ ಕಥೆಗಳು

“ದೀಡೆಕರೆ ಜಮೀನು”ನಲ್ಲಿರುವ ಸಂಕಟದ ಕಥೆಗಳು

ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.
ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ

read more
“ಹಸ್ತಿನಾವತಿ”: ಇದು ಭಾರತದ ಕಥೆ….

“ಹಸ್ತಿನಾವತಿ”: ಇದು ಭಾರತದ ಕಥೆ….

ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.
ನೆನ್ನೆಯಷ್ಟೇ ಬಿಡುಗಡೆಯಾದ ಜೋಗಿಯವರ ಕಾದಂಬರಿ “ಹಸ್ತಿನಾವತಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

read more
ಚಿತ್ರಜಗದೊಳಗೊಂದು ಮಿಂಚಿನ ಸಂಚಾರ-ನಮ್ಮ ಶಂಕರ

ಚಿತ್ರಜಗದೊಳಗೊಂದು ಮಿಂಚಿನ ಸಂಚಾರ-ನಮ್ಮ ಶಂಕರ

ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು.
ಸತೀಶ ಬಳೆಗಾರ ಬರೆದ ‘ಶಂಕರ ನಾಗ್ The Legend’ ಕೃತಿಯ ಕುರಿತು ರಾಮ್‌ ಪ್ರಕಾಶ್‌ ರೈ ಬರಹ

read more
ಮಿಲ್ಟ್ರಿ ಟ್ರಂಕೊಳಗಿನ ಕಥೆಗಳು….

ಮಿಲ್ಟ್ರಿ ಟ್ರಂಕೊಳಗಿನ ಕಥೆಗಳು….

ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ.
ಡಾ. ಲಕ್ಷ್ಮಣ ವಿ.ಎ. ಬರಹಗಳ ಸಂಕಲನ “ಮಿಲ್ಟ್ರಿ ಟ್ರಂಕು”ಕ್ಕೆ ರಹಮತ್‌ ತರೀಕೆರೆ ಬರೆದ ಮುನ್ನುಡಿ

read more
ಮನುಷ್ಯ ಲೋಕದ ಸಂಕಟಗಳು ಕಥೆಗಳಾದ ಪರಿ

ಮನುಷ್ಯ ಲೋಕದ ಸಂಕಟಗಳು ಕಥೆಗಳಾದ ಪರಿ

ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.
ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ

read more
“ಅಕ್ಷಯ ಕಾವ್ಯ”ಕ್ಕೆ ಒಂದು ಪ್ರವೇಶಿಕೆ

“ಅಕ್ಷಯ ಕಾವ್ಯ”ಕ್ಕೆ ಒಂದು ಪ್ರವೇಶಿಕೆ

“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ.
ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ ಕೃತಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ