ಹೃದಯದ ಕಲ್ಲು ಮತ್ತು ನದಿಯೊಂದು ನಿದ್ರಿಸಿದಾಗ
ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.
ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್ ಮೇತ್ರಿ ಬರಹ
ಕಂದಹಾರ್ ಏರ್ಬೇಸಿನ ಅಪಾಯಕಾರಿ ಉಪಕ್ಯಾಂಪುಗಳು
ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ.
ಮಂಜುನಾಥ್ ಕುಣಿಗಲ್ ಬರೆದ “ಕುಣಿಗಲ್ ಟು ಕಂದಹಾರ್” ಕೃತಿಯಿಂದ ಆಯ್ದ ಲೇಖನ ನಿಮ್ಮ ಓದಿಗೆ
‘ಒಳ್ಳೆಯ ದೆವ್ವ’ ಕಾದಂಬರಿ: ಮಕ್ಕಳ ಮನಸ್ಸಿನ ವೈದ್ಯ
ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ.
ಡಾ. ಬಸು ಬೇವಿನಗಿಡದ ಬರೆದ “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿಯ ಕುರಿತು ನಾಗರಾಜ ಎಂ ಹುಡೇದ ಬರಹ
ಇಸ್ಕೂಲಿನ ಬಿಡುಗಡೆ ಮತ್ತು ಗಣರಾಜ್ಯ ದಿನದ ಸಂಭ್ರಮ
ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ.
ನಾಳೆ ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಅಂಕಣ ಬರಹಗಳ ಸಂಕಲನ ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಇಸ್ಕೂಲಿನ ಕುರಿತ ಅವರ ಮಾತುಗಳು ನಿಮ್ಮ ಓದಿಗೆ
ಜ್ಞಾನದ ಹೊಸ ಆಯಾಮ ತೋರುವ ಬರಹಗಳು
ಯಾಜಿಯವರು ಸರ್ಚ್ಲೈಟ್ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು.
ನಾರಾಯಣ ಯಾಜಿಯವರ “ನೆಲ ಮುಗಿಲು” ಅಂಕಣ ಬರಹಗಳ ಸಂಕಲನಕ್ಕೆ ಹರಿಪ್ರಕಾಶ್ ಕೋಣೆಮನೆ ಬರೆದ ಮುನ್ನುಡಿ
ಸ್ತ್ರೀ ಸ್ವಾತಂತ್ರ್ಯದ ಮಗ್ಗಲುಗಳು…
ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ.
ಮನು ಗುರುಸ್ವಾಮಿ ಬರೆದ “ಅವಳೂ ಕತೆಯಾದಳು” ಕೃತಿಗೆ ಡಾ. ವಿಜಯಕುಮಾರಿ ಎಸ್ ಕರಿಕಲ್ ಬರೆದ ಮುನ್ನುಡಿ
ಫಾರೆಸ್ಟರ್ ಪೊನ್ನಪ್ಪ ಮತ್ತು ಕಾಡಿನ ಕೌತುಕಗಳು
ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.
ನೌಶಾದ್ ಜನ್ನತ್ತ್ ಹೊಸ ಕಾದಂಬರಿ “ಫಾರೆಸ್ಟರ್ ಪೊನ್ನಪ್ಪ” ಇಂದ ಆಯ್ದ ಭಾಗ ನಿಮ್ಮ ಓದಿಗೆ
ಪರಿಸರದ ಪಾಠಕ್ಕೆ ಇದೇ ಸೂಕ್ತ ತಾಣ!
ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಶಶಿಧರ ಹಾಲಾಡಿಯವರ “ನಾ ಸೆರೆಹಿಡಿದ ಕನ್ಯಾಸ್ತ್ರೀ” ಪ್ರಬಂಧ ಸಂಕಲನದ ಒಂದು ಬರಹ ನಿಮ್ಮ ಓದಿಗೆ
ಹಳ್ಳಿಯ ಅಂತರಾತ್ಮದ ಆರ್ದ್ರ ಕಥನ
ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ.
ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ









