ಎದೆ ಒಡೆಯುತ್ತಿದೆ!

ಎದೆ ಒಡೆಯುವ ಶಬ್ದ ಕೇಳುತ್ತಿದೆ
ಸಣ್ಣಗೆ
ರಾತ್ರಿ ಬಿದ್ದ ಕೆಟ್ಟ ಕನಸಿನಲ್ಲಿ
ಅವಳದ್ದೇ ನೆರಳು

ಕಚ್ಚದೆಯೇ ವಿಷ ಉಗುಳಿದೆ
ಬುಸುಗುಡುವ ಹಾವೊಂದು
ಗಾಯವಾಗದೇ ವಿಷವೇರಿದೆ
ನೇರವಾಗಿ ಎದೆಗೆ

ಪ್ರೇಮ ಮತ್ತು ವಾತ್ಸಲ್ಯದ ಮರಕ್ಕೆ
ನೇಣು ಹಾಕಿಕೊಳ್ಳುವ ಬಯಕೆಗೆ
ಯಾರು ಹೊಣೆ?
ಈ ಅನಿರೀಕ್ಷಿತ ಸಾವಿಗೆ
ಹೃದಯವಿಲ್ಲ, ಕನಿಕರವಿಲ್ಲ

ಕ್ಷಮಿಸಿ ಬಿಡಿ
ಸಾವು ನನ್ನನ್ನಷ್ಟೇ ಆವರಿಸಲಿ
ಯಾವುದೇ ಊಹೆಗಳು
ಯಾವುದೇ ಗಾಸಿಪ್ಪುಗಳು ಬೇಡ
ಕಾರಣ ತಿಳಿಯುವ
ಗುಢಚಾರಿಕೆಯೂ ಬೇಡ..

ಹೌದು ಎದೆ ಒಡೆಯುತ್ತಿದೆ
ಸಣ್ಣಗೆ!

ನಾಗರಾಜ ಕಾಂಬಳೆ ಬೆಳಗಾವಿ ಜಿಲ್ಲೆಯವರು
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು
ಓದುವುದು, ಕತೆ-ಕವಿತೆ ಬರೆಯುವುದು ಇವರ ಹವ್ಯಾಸಗಳು