Advertisement
ಅರುಣ್ ಜೋಳದಕೂಡ್ಲಿಗಿ

ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)

ಜೀವನ ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿ ಕೆಲವು ಮಾತುಗಳು

ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಕೊನೆಯ ಕಂತು

Read More

ಬಿಟ್ಟೇನೆಂದರೂ ಬಿಡದ ಹಣೆಪಟ್ಟಿಗಳ ಕಳಚುವುದು ಹೇಗೆ…

ಈ ಹೆಸರಿನಿಂದುಂಟಾಗುವ ಸಾಮಾಜಿಕ ಅಪಮಾನದಿಂದ ದೂರಾಗಲು ಈ ಸಮುದಾಯ ತನ್ನ ಹೆಸರನ್ನು ಹೊಸ ವೃತ್ತಿಗನುಗುಣವಾಗಿ ಗಿರಣಿ ವಡ್ಡರ್ ಮುಂತಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಡಿನೋಟಿಫೈಡ್ ಸಮುದಾಯ ಅಪರಾಧಿ ಬುಡಕಟ್ಟು ಎನ್ನುವ ಹಣೆಪಟ್ಟಿ ಕಳಚಿದರೂ ಅಪರಾಧದ ಸಂಕೇತವಾದ `ಗಂಟಿಚೋರ್ಸ್’ ಎನ್ನುವ ಹೆಸರಿನಿಂದಲೇ ಈ ಸಮುದಾಯದ ಜನರು ತಮ್ಮ ಇರವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಡಾ. ಅರುಣ್ ಜೋಳದಕೂಡ್ಲಿಗಿ ಸರಣಿ

Read More

ಇರಾನ್ ದೇಶಕ್ಕೆ ತೆರಳಿದ್ದ ಕ್ರೀಡಾಪಟು ಅರ್ಜುನ ಬಸಪ್ಪ ಗಾಯಕವಾಡ

ಗಂಟಿಚೋರ್ ಸಮುದಾಯದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಕ್ರೀಡಾಪಟು ಅಂದರೆ, ಅರ್ಜುನ ಬಸಪ್ಪ ಗಾಯಕವಾಡ. ಕ್ಷೇತ್ರಕಾರ್ಯದಲ್ಲಿ ರಾಯಭಾಗ ಸಮೀಪದ ಶಾಹು ಪಾರ್ಕ್ ನೋಡಲು ಹೋದಾಗ ನಮ್ಮ ಜತೆಗೆ ಎ.ಬಿ. ಗಾಯಕವಾಡ ಅವರ ಮಗ ವಿಜಯ್ ನಮ್ಮ ಜೊತೆಗೆ ಬಂದಿದ್ದರು. ತನ್ನ ತಂದೆಯ ಕ್ರೀಡಾ ಸಾಹಸವನ್ನು ವಿವರಿಸಿದರು. ಗಾಯಕವಾಡರ ರಾಯಭಾಗದ ಮನೆಗೆ ಹೋಗಿದ್ದೆವು. ಅಲ್ಲಿ ಗಾಯಕವಾಡರು ಕ್ರೀಡೆಯಲ್ಲಿ ಭಾಗವಹಿಸಿದ ಫೋಟೋ ಚಿತ್ರಗಳು ನೋಡಲು ಸಿಕ್ಕವು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಇಪ್ಪತ್ತಮೂರನೆಯ ಕಂತು

Read More

ಕ್ರಿಯಾಶೀಲ ಸಂಘಟನೆಗಳು ಮತ್ತು ಆಗ್ರಹಗಳು

ಗಂಟಿಚೋರರ ಸಂಘಟನೆಗಳು ಆಯಾ ಭಾಗದ ಸಮಸ್ಯೆಗಳನ್ನು ಗುರುತಿಸುವ ಮತ್ತು ಆ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಸಮುದಾಯದ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಲಿಂಗದ ನೆಲೆಯಲ್ಲಿ ಮಹಿಳೆಯರ ಸಮಸ್ಯೆಗಳು ಬೇರೆಯೇ ಆಗಿರುತ್ತವೆ. ಗಂಟೀಚೋರರ ಕಥನಗಳು ಸರಣಿಯಲ್ಲಿ ಗಂಟಿಚೋರರ ಸಂಘಟನೆಗಳ ಕುರಿತು ಅರುಣ್ ಜೋಳದ ಕೂಡ್ಲಿಗಿ ಬರೆದ 22ನೆಯ ಕಂತು ಇಂದಿನ ಓದಿಗಾಗಿ

Read More

ಬೆಂಕಿಯಲ್ಲಿ ಅರಳಿದ `ಹೂ’ “ಗೋದಾವರಿ ಗಂಟಿಚೋರ”

ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ