Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಕಾಲದೊಂದಿಗೆ ಇಲ್ಲಿ ಕೆಲವೊಂದು ಬದಲಾಗುತ್ತವೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಊರಲ್ಲಿ ಯಾವುದೇ ಮನೆಯ ಮದುವೆಯಾದ್ರೂ ನಮಗೆ ಊರ ಹಬ್ಬದ ವಾತಾವರಣದಂತೆ ಅನಿಸುತ್ತಿತ್ತು. ಮದುವೆ ಮನೆ ಊಟದ ಖುಷಿ ಒಂದೆಡೆಯಾದರೆ ಅಲ್ಲಿ ಮೈಕಿನಲ್ಲಿ ಹಾಕಿರುತ್ತಿದ್ದ ಚಲನಚಿತ್ರ ಗೀತೆಗಳನ್ನು ಕೇಳುವುದೂ ಖುಷಿ ಕೊಡುತ್ತಿತ್ತು. ಮೊದಲಿಗೆ ‘ಮೂಷಿಕ ವಾಹನ ಮೋದಕ ಹಸ್ತ’ ಹಾಡಿನಿಂದ ಮದುವೆಯ ಮನೆಯ ಹಾಡುಗಳು ಶುರುವಾಗುತ್ತಿದ್ದವು. ಆಗ ಊರಲ್ಲಿ ಮದುವೆಯಾದರೆ ಆ ಮದುವೆಯಲ್ಲಿ ಊಟ ಬಡಿಸೋಕೆ ಅಂತಾ ದುಡ್ಡು ಕೊಟ್ಟು ಜನರನ್ನು ಕರೆಸುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಆಫ್‌ಲೈನ್ ಹಾಗೂ ಆನ್‌ಲೈನ್ ಭಿಕ್ಷುಕರು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮನೆಯಲ್ಲಿ ಬೆಳೆದ ಭತ್ತದಲ್ಲಿ ಭಿಕ್ಷುಕರಿಗೆಂದೇ, ಭತ್ತ ಕೊಯ್ದು, ತುಳಿಸಿ, ತೂರಿ ಚೀಲದಲ್ಲಿ ತುಂಬಿಕೊಂಡು ಕೊನೆಯಲ್ಲಿ‌ ಮಿಕ್ಕಿದ ಗುಡಿಸಿಟ್ಟುಕೊಂಡ ಭತ್ತವನ್ನು ಚೀಲದಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು. ಅದನ್ನು ಮನೆಗೆ ನೀಡಿಸಿಕೊಳ್ಳೋಕೆ ಬರುವ ಭಿಕ್ಷುಕರಿಗೆ ಹಾಕಲು ಇಟ್ಟುಕೊಳ್ಳುತ್ತಿದ್ದರು. ಸಣ್ಣ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡಿ ಬಂದೋರಿಗೆ ಭತ್ತ ಹಾಕಿದ ನಂತರ ‘ಏನಾದ್ರೂ ತಿನ್ನೋಕಿದ್ರೆ ಕೊಡಪ್ಪ’ ಅಂತಾ ಅವರು ಕೇಳಿದಾಗ ಕರುಳು ಚುರ್ ಎನ್ನುತ್ತಿತ್ತು..
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಟೀವಿ’ಯಿದ್ದವರು ‘ಠೀವಿ’ಯಿಂದ ಬೀಗುತ್ತಿದ್ದ ಕಾಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ದಿನ ಸಂಜೆ ಒಂದು‌ ಧಾರವಾಹಿ, ಶುಕ್ರವಾರ ‘ಚಿತ್ರಮಂಜರಿ’ ಹೆಸರಿನಲ್ಲಿ‌ ಕನ್ನಡ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇವನ್ನ ನೋಡಲು ನಾವು ತುಂಬಾ ಕಾತುರರಾಗಿ ಸಂಜೆ ಏಳು ಗಂಟೆಗೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದೆವು. ನಮ್ಮಜ್ಜನ ಮನೆಯಲ್ಲಿ ಟಿವಿ ಇರಲಿಲ್ಲ. ನಾವು ಬೇರೆಯವರ ಮನೆಗೆ ಟಿವಿ‌ ನೋಡಲು ಹೋಗಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ‌ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ‌. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂರನೆಯ ಕಂತು

Read More

ಬಸ್ಸಪ್ಪ ಮೇಷ್ಟ್ರ ಸೈಕಲ್ ಪಂಕ್ಚರ್ ಪ್ರಸಂಗ!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ