Advertisement
ಭವ್ಯ ಟಿ.ಎಸ್.

ಭವ್ಯ ಟಿ.ಎಸ್. ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಾನುಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಹಲವು ಪ್ರಮುಖ ಪತ್ರಿಕೆಗಳು ಹಾಗೂ ವೆಬ್ ಮ್ಯಾಗಜೀನ್‌ಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ವಸುಂಧರೆ" ಇವರ ಪ್ರಕಟಿತ ಚೊಚ್ಚಲ ಕವನ ಸಂಕಲನ.

“ಅಡಿಕೆ” ಎಂಬ ಮಲೆನಾಡಿನ ಜೀವನಾಡಿ: ಭವ್ಯ ಟಿ.ಎಸ್. ಸರಣಿ

ಸಂಜೆ ಆರಾಗುತ್ತಿದ್ದಂತೆ ಮನೆ ಎದುರಿನ ಅಥವಾ ಹಿಂದಿನ ಅಡಿಕೆ ಚಪ್ಪರದ ಕೆಳಗೆ ಅಡಿಕೆ ಸುಲಿಯುವ ಹೆಂಗಳೆಯರು ಮೇಳೈಸುತ್ತಿದ್ದರು. ಕಿಲಕಿಲ ನಗು, ಮಾತು, ಹರಟೆ, ಹಾಸ್ಯ, ವಿನೋದಗಳ ನಡುವೆ ಮೆಟ್ಟುಗತ್ತಿಯ ಮೇಲೆ ಕುಳಿತು ತಮ್ಮ ಚುರುಕು ಕೈಗಳಿಂದ ಅಡಿಕೆಗಳನ್ನು ಹೆಕ್ಕಿಕೊಂಡು ಕತ್ತಿಯಲ್ಲಿಟ್ಟು ಸಿಪ್ಪೆ ತೆಗೆದು, ಅಡಿಕೆಯನ್ನು ಹೋಳು ಮಾಡಿ ಕತ್ತರಿಸಿ ಬುಟ್ಟಿಗೆ ತುಂಬುತ್ತಾರೆ. ಮಧ್ಯರಾತ್ರಿಯವರೆಗೂ ಈ ಕೆಲಸ ನಡೆಯುವುದರಿಂದ ಊರಿನ ಪ್ರಚಲಿತ ವಿದ್ಯಮಾನಗಳು, ಸದ್ಯದಲ್ಲೇ ನಡೆಯಲಿರುವ ಮದುವೆಗಳು, ನಡೆದ ಜಗಳಗಳು, ಸಾವು-ನೋವು, ಕಷ್ಟಸುಖಗಳು ಅಲ್ಪಸ್ವಲ್ಪ ಬಣ್ಣ ಹಚ್ಚಿಕೊಂಡು, ಅತಿರಂಜಿತವಾಗಿ ಇಲ್ಲಿ ಚರ್ಚಿತವಾಗುತ್ತವೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಮನದಂಗಳದಲ್ಲಿ ಬೆಳಗುವ ಮಲೆನಾಡಿನ ದೀಪಾವಳಿ: ಭವ್ಯ ಟಿ.ಎಸ್. ಸರಣಿ

ಬೇರೆಲ್ಲ ಹಬ್ಬಗಳು ಒಂದು ಎರಡು ದಿನಗಳಲ್ಲಿ ಮುಗಿದುಹೋದರೆ, ದೀಪಾವಳಿ ಮಾತ್ರ ನಾಲ್ಕು ಐದು ದಿನ ಮನೆಗಳಲ್ಲಿ ಸಂಭ್ರಮ ತುಂಬಿಸುತ್ತದೆ. ಕಾರ್ತಿಕ ಮಾಸ ಪೂರ್ತಿ ದೇವಾಲಯಗಳಲ್ಲಿ ಮನೆಗಳಲ್ಲಿ ನಿರಂತರ ದೀಪೋತ್ಸವ ಜರಗುತ್ತದೆ. ದೀಪಾವಳಿ ಹಬ್ಬಕ್ಕೆ ಪೂರ್ವ ಸಿದ್ಧತೆ ಸಾಕಷ್ಟು ಬೇಕು. ಭೂರೆ ತುಂಬಿಸುವುದು ಎಂಬ ಪದ್ಧತಿಯಿಂದ ಶುರುವಾಗುವ ಈ ಹಬ್ಬ ಎಣ್ಣೆ ಸ್ನಾನ, ಗೋಪೂಜೆ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ, ಕರಿ ಎಂಬ ದಿನಗಳನ್ನು ಮುಗಿಸಿ ಹೊಸ ತೊಡಕುವಿನೊಂದಿಗೆ ಬೀಳ್ಕೊಡುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ಭೂಮಿ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ: ಭವ್ಯ ಟಿ.ಎಸ್. ಸರಣಿ

ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ‌ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ಮನೆಯಂಗಳದ ನಾಕವೀ ಹೂವಿನಲೋಕ: ಭವ್ಯ ಟಿ.ಎಸ್. ಸರಣಿ

ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ