Advertisement
ಗುರುದತ್ ಅಮೃತಾಪುರ

ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..

ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ

ಇಷ್ಟೆಲ್ಲಾ ಬಟ್ಟೆ ಧರಿಸಿಕೊಂಡು ತಯಾರಾಗುವುದೇ ದೊಡ್ಡ ಸಾಹಸ. ಕೈ ಕಾಲುಗಳ ಸಲೀಸಾದ ಚಲನೆ ಇಲ್ಲದಂತಾಗಿ, ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವ ಭಾವನೆ. ತಯಾರಾಗಲು ಒಂದರ್ಧ ಘಂಟೆ ಹಿಡಿಯುತ್ತಿತ್ತು. ಮನೆಯ ಒಳಗೆ ಹೀಟರ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ತಯಾರಾಗುವ ಒಳಗೆ ಮೈ ಎಲ್ಲಾ ಬೆವರಲು ಶುರು. ಹೊರಗೆ ಕೊರೆಯುವ ಚಳಿ. ನನ್ನಷ್ಟೇ ಭಾರದ ಉಡುಗೆ ತೊಡುಗೆ ತೊಟ್ಟು ಹೊರ ನಡೆದರೆ ಎಲ್ಲೆಲ್ಲೂ ಹಿಮ. ಈ ರೀತಿ ತಯಾರಾಗಿದ್ದರೂ, ಆ ದಿನದ ಸುತ್ತಾಟ ಮುಗಿಯುವ ಹೊತ್ತಿಗೆ ಕಾಲು ಬೆರಳುಗಳು ಮರಗಟ್ಟಿ ಹೋಗಿರುತ್ತಿದ್ದವು.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಮತ್ತಷ್ಟು ಅನುಭವಗಳನ್ನು…

Read More

ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ

ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

Read More

ಗುರುದತ್ ಅಮೃತಾಪುರ ಬರೆವ ಹೊಸ ಸರಣಿ ಇಂದು ಆರಂಭ

ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ  ಇತಿಹಾಸವನ್ನೂ ಅರಿಯುವ ಕುತೂಹಲ  ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ