Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಗ್ಯೋರ್ಗಿ ಗೊಸ್ಪೊಡಿನೊವ್ ಅನೇಕ ವಿಧಗಳಲ್ಲಿ ಒಬ್ಬ ವಿಶಿಷ್ಟ ಬರಹಗಾರ. ನಾನು ಅವರ ಬರಹಗಳನ್ನು ಮೊದಲಿನಿಂದಲೂ ಓದುತ್ತಿದ್ದೇನೆ ಹಾಗೂ ಕುತೂಹಲಕಾರಿ ಪರಿಕಲ್ಪನೆ, ಅದ್ಭುತ ಕಲ್ಪನೆ ಮತ್ತು ನಿಖರವಾದ ಬರವಣಿಗೆಯ ತಂತ್ರವನ್ನು ಅವರ ಹಾಗೆ ಬೇರೆ ಯಾರಿಂದಲೂ ಸಂಯೋಜಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್-ರವರ(Georgi Gospodinov) ಕಾವ್ಯದ ಕುರಿತ ಬರಹ

Read More

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಟ್ರಿನಿಡಾಡ್ ಎಂಡ್ ಟೊಬೇಗೊ (Trinidad and Tobago) ದೇಶದ ಯುವ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ-ರವರ (Danielle Boodoo-Fortuné, 1986) ಕಾವ್ಯದ ಕುರಿತ ಬರಹ

Read More

ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಉಗ್ರಮನಸ್ಸಿನ ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಾಭಿಮಾನಿಗಳಲ್ಲಿ ಅವರ ಜನಪ್ರಿಯತೆ ತುಸು ಕಡಿಮೆಯೆಂದೇ ಹೇಳಬೇಕು, ಮತ್ತು ಅವರು ಎಂದಿಗೂ ಮಹಾನ್ ರಾಜಕೀಯ ಕವಿತೆ, ಪ್ರಚಾರಕರ ಸಾಂದರ್ಭಿಕ ಕವಿತೆ ಅಥವಾ ರಾಜಿಯಾಗದ, ಪಟ್ಟುಬಿಡದ ಕ್ರಾಂತಿಕಾರಿಗಳ ಘೋಷಣೆ ತುಂಬಿದ ಕವನಗಳನ್ನು ಬರೆಯುವುದಿಲ್ಲ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇದು 50ರ ಬರಹ! ಇಂದಿನ ಸರಣಿಯಲ್ಲಿ ಜಮೈಕಾ (Jamaica) ದೇಶದ ಖ್ಯಾತ ಕವಿ ಮರ್ವಿನ್ ಮೊರಿಸ್-ರವರ (Mervyn Morris, 1937) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಗಯಾನಾ ದೇಶದ ಕವಿ ಮಾರ್ಟಿನ್ ಕಾರ್ಟರ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ