Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಎಸ್.‌ ಜಯಶ್ರೀನಿವಾಸರಾವ್‌ ಬರೆದ ಮೂರು ಕವಿತೆಗಳು

“ಕೆಲದಿನ ಮಧ್ಯಾಹ್ನ ನಾಲ್ಕು ಘಂಟೆಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಒಂದು ಚಾ ಬಹುಮಾನ.
ಕೆಲದಿನ ಸಂಜೆ ಏಳು-ಏಳೂವರೆಯಷ್ಟ್ಹೊತ್ತಿಗೆ.
ಪಾತ್ರೆಯೆಲ್ಲ ತೊಳೆದ ಮೇಲೆ
ಊಟ ಬಹುಮಾನ.
ಕೆಲಸಲ ರಾತ್ರಿ ಊಟದ ನಂತರ.” -ಎಸ್.‌ ಜಯಶ್ರೀನಿವಾಸರಾವ್‌ ಬರೆದ ಮೂರು ಕವಿತೆಗಳು

Read More

ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಫಿಲಿಪ್ಸ್ ಅವರ ಕವಿತೆಗಳಲ್ಲಿ ಅಪಾರವಾದ ಉದಾರ ಮನೋಭಾವವಿದೆ. ‘ವ್ಯಕ್ತಪಡಿಸಿದ ಪ್ರತಿಯೊಂದು ಕಲ್ಪನೆ ಅಥವಾ ಭಾವನೆಯು ಜನರು ಅಥವಾ ಅವರ ಸುತ್ತಲಿನ ಪ್ರಪಂಚದ ಮೇಲೆ ಅವಲಂಬಿತವಾಗಿರುವುದರಿಂದ ತನಗಾಗಿ ಮಾತ್ರ ಬರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್-ರವರ (ESTHER PHILLIPS) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಎಕೆಲೋಫ಼್ ಎಂಬ “ಸರ್ರಿಯಲಿಸ್ಟ್‌” ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎಕೆಲೋಫ಼್ ಅವರ ವೃತ್ತಿಜೀವನದ ಪ್ರತಿಯೊಂದು ತಿರುವಿನಲ್ಲೂ ಇದೇ ಕಥೆ ಪುನರಾವರ್ತನೆಯಾಗುತ್ತಿತು. ಮೂವತ್ತರ ದಶಕದ ಉತ್ತರಾರ್ಧದಲ್ಲಿ ಎಕೆಲೋಫ಼್ ಮಾನವ ವ್ಯಕ್ತಿನಿಷ್ಠೆಗೆ ಆಮೂಲಾಗ್ರ ಮತ್ತು ಹೆಚ್ಚು ಅಮೂರ್ತವಾದ ದೃಷ್ಟಿಕೋನದೆಡೆಗೆ ತಮ್ಮ ಕಾವ್ಯಪ್ರಯೋಗ ನಡೆಸುತ್ತಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಗುನ್ನಾರ್ ಎಕೆಲೋಫ಼್-ರವರ (Gunnar Ekelof, 1907-1968) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಪಾಕ್ ಚೇಯ್ಸಾಮ್ ಅವರ ಕವಿತೆಗಳು ನೇರ ಆಕ್ರಮಣ ಮಾಡುವುದಿಲ್ಲ, ಆದರೆ ವಿಷಯಗಳ ಸುತ್ತ ಸುತ್ತಾಡುತ್ತಾ ಇರುತ್ತವೆ. ಈ ಕಾವ್ಯಾತ್ಮಕ ಸುತ್ತಾಡುವಿಕೆ ಅನಿವಾರ್ಯವಾಗಿ ಅಂತರವನ್ನು ಸೃಷ್ಟಿಸುತ್ತದೆ, ಇದು ಪ್ರಿಯತಮೆಗಾಗಿ ಹಂಬಲದಂತಹ ಅನ್ಯೋನ್ಯ ವಿಷಯದ ಬಗ್ಗೆಯೂ ಸಹ ಕವಿತೆಗಳು ಮಾತನಾಡುವದರಿಂದ ಬೇರ್ಪಡುವಿಕೆಯ ನೋವನ್ನು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ದಕ್ಷಿಣ ಕೊರೆಯಾ ದೇಶದ ಹೆಸರಾಂತ ಕವಿ ಪಾಕ್ ಚೇಯ್ಸಾಮ್ -ರವರ
(Pak Chaesam, 1933-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ