Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ವೈಚಾರಿಕತೆಯ ಶುಷ್ಕತೆಯನ್ನು ದೂರವಿಡುವ ರೂಪಕಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು…”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚೆಕ್ ಗಣರಾಜ್ಯದ ಕವಿ ಮಿರೊಸ್ಲಾವ್ ಹೊಲುಪ್-ರವರ (Miroslav Holub, 1923-1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

‘ಮೈಕ್ರೊಗ್ರಾಮ್’ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಚಲಿಸುವ ಹಿಮದಂತೆ ಕಾಣುವ ಫ್ಲೆಮಿಂಗೊ ಪಕ್ಷಿಯ ಉತ್ಸಾಹ, ಕಳ್ಳಿಗಿಡದ ಸಸ್ಯಜನ್ಯ ಮಾನವದ್ವೇಷ, ಮರದಲ್ಲಿ ಕಂಬಳಿಹುಳಗಳು ನಡೆಸುವ ಗುಪ್ತಕಾರ್ಯ – ಇವೆಲ್ಲ ನನ್ನನ್ನು ಪಕ್ಷಿಗಳ ವರ್ಣಮಾಲೆಯನ್ನು ಅರ್ಥಮಾಡಿಕೊಳ್ಳಲು ಬ್ರಹ್ಮಾಂಡದ ಏಣಿಯ ಮೇಲೆ ಏರಲು ಕರೆದೊಯ್ದವು; ಇವು ಈ ಗ್ರಹದ ಆಧ್ಯಾತ್ಮಿಕ ಕ್ರಮವನ್ನು ಕಾಪಾಡುವ ಉಚ್ಛ ಸಂಕೇತಗಳಾಗಿವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

“ಹೊಸ ಸರಳತೆ”ಯ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಲೊವೀನಿಯಾ ದೇಶದ ಕವಿ ಪೀಟರ್ ಸೆಮೊಲಿಕ್-ರವರ (Peter Semolič) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

‘ಗಣಿತೀಯ ಗೀತರಚನೆಕಾರ’: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಪದಗಳಷ್ಟೇ ಅಲ್ಲದ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

‘ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ’ ಎಂಬ ಕವಿತೆಯಲ್ಲಿ, ಇನ್ನೊಬ್ಬರ ಕವಿತೆ ಓದುವಿಕೆಯ ಮೌನವನ್ನು ಆಲಿಸುವ ಮೂಲಕ ಮಾತ್ರ ನಿಮ್ಮ ಮುಂದೆ ಇರುವ ಕವಿತೆ ನಿಜವಾಗಿಯೂ ಯಶಸ್ವಿಯಾಗುತ್ತದೆ. ಅಂತೆಯೇ ‘Harmony’ ಎಂಬ ಕವಿತೆಯಲ್ಲಿ “ವಸ್ತುಗಳು” ಮತ್ತು “ಪದಗಳಲ್ಲದವು” ಪ್ರಾಸದ ಸ್ಥಿತಿಗೆ ಮರಳಬೇಕು ಎಂದು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ