Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

‘ಮಾಡರ್ನಿಸ್ಟ್’ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಒಕಾರ-ರು ಮೂಲಭೂತವಾಗಿ ಒಬ್ಬ ಭಾವಗೀತಾತ್ಮಕ ಕವಿಯಾಗಿದ್ದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೈಜೀರಿಯಾ ದೇಶದ ಕವಿ ಗೇಬ್ರಿಯಲ್ ಒಕಾರಾ-ರವರ (Gabriel Okara, 1921-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಭಾಷೆಯ ಮುಖವಾಡಗಳನ್ನು ತೆಗೆಸುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಲೀಪ್ಸ್‌ಕರವರು ವಿಸ್ತಾರವಾದ ರೂಪಕಗಳು ಹಾಗೂ ಕಾವ್ಯಾತ್ಮಕವಾದ ಪರಿಕಲ್ಪನೆಗಳನ್ನು ಮುಕ್ತವಾಗಿ ಬಳಸತೊಡಗಿದರು, ಹಾಗೇ ಅವುಗಳ ಅರ್ಥಗಳನ್ನು ಕೂಡ ಸಂಕೀರ್ಣಗೊಳಿಸುತ್ತಾ ಹೋದರು. ಅವರ ಕವನಗಳಲ್ಲಿನ ಆಗುಹೋಗುಗಳು ಒಂದು ತರಹದ ಅತಿವಾಸ್ತವಿಕವಾದ ಸ್ವಪ್ನವ್ಯೋಮದಲ್ಲಿ ನಡೆಯುತ್ತದೆ. ಆದ್ದರಿಂದ ಕವನಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಯೊಂದೇ ಬಿಡುಗಡೆಯ ಮಾರ್ಗವಾಗುತ್ತದೆ.

Read More

ಹೂವೊಂದರ ಹಾಡುಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅನಾರೋಗ್ಯ ವಿಧಿಸಿದ ಮಿತಿಗಳನ್ನು ಮೀರಿ ನಿಂತ ಅವರ ಕಾವ್ಯ-ಧ್ವನಿ ಆಧುನಿಕ ಪ್ರಪಂಚದ ಹಿಂಸಾಚಾರ ಮತ್ತು ಕತ್ತಲೆಯ ಬಗ್ಗೆ ಭಾವಗೀತಾತ್ಮಕ ಹೇಳಿಕೆಗಳನ್ನು ನೀಡುತ್ತದೆ. ಇವುಗಳಿಂದ ಹುಟ್ಟಿವೆ ಅವರ ಛಿದ್ರಿತ ವಾಕ್‌ಶೈಲಿಯ ಅತಿವಾಸ್ತವಿಕ ಸೌಂದರ್ಯದಿಂದ ತಲ್ಲಣಗೊಳಿಸುವ ಪ್ರತಿಮಾಕಾರ ಕವನಗಳು. ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಮಿತವಚನದ ಸುಂದರ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಈ ಮಿತವಚನದ, ಸುಂದರ ಕವನಗಳು, ಕಲ್ಪನಾತ್ಮಕವಾಗಿ ಸಮೃದ್ಧವಾದ ಮತ್ತು ಪರಿಣಿತಿಯಿಂದ ಆಸವಿಸಿದ ಕವನಗಳು, ಪ್ರಕ್ಷುಬ್ಧ ತೇಜಸ್ಸಿನಿಂದ ಕಂಪಿಸುತ್ತವೆ. ಈ ಕವನಗಳನ್ನು ಓದುವಾಗ, ಅವುಗಳನ್ನು ರಚಿಸಿದ ಮೌನಗಳನ್ನು, ಮತ್ತು ಈ ಮೌನಗಳು ಹೇಗೆ ಒಂದೊಂದಾಗಿ ಬಂದು ಅಸಲಾದ ಮತ್ತು ಅಗತ್ಯವಾದ ಪದಗಳಾಗಿ ಒಟ್ಟು ಸೇರುವುದನ್ನು ನಾನು ಕೇಳಿಸಿಕೊಂಡಂತೆ ಅನಿಸಿತು ನನಗೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸರಳತೆಯಲ್ಲಿ ಬೆಳಗುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ತ್ರಾನ್ಸ್‌ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್‌ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ