Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಸರಳ ಮತ್ತು ನಿಷ್ಕಪಟ ಸ್ವರದ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ಅನೇಕ ಕವನಗಳ ಸರಳ ಮತ್ತು ನಿಷ್ಕಪಟ ಸ್ವರವು ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳಿಗೆ ಹೆಚ್ಚು ಋಣಿಯಾಗಿದೆ, ಆದರೆ ಇತರ ಕವನಗಳಲ್ಲಿ ಇದು ನೇರವಾದ ಆದರೆ ಅತ್ಯಂತ ಸಾಮಾನ್ಯ ವಿಷಯಗಳ ಸೂಕ್ಷ್ಮ ವಿವರಣೆಯಾಗಿ ಮಾರ್ಪಡುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ವೇರ್ನರ್ ಆಸ್ಪೆನ್‌ಸ್ತ್ರೋಮ್-ರ (Werner Aspenström, 1918–1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಒಂದು ಭಿನ್ನವಾದ ಅನುಭವದ ಕಾವ್ಯವು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ಮೊದಲ ಸಂಕಲನವು ನಗರ ಜೀವನದಲ್ಲಿ ಸುಲಭವಾಗಿ ಕಂಡುಬರದ ನಿರ್ಮಾಲ್ಯದ ಹಂಬಲವನ್ನು ತೋರಿಸುತ್ತದೆ, ಆದರೆ ಕಾವ್ಯದ ಸ್ವರ ಶಾಂತವಾಗಿದೆ, ಬಹುಶಃ ಹೆಚ್ಚು ವಿರಕ್ತಿಯಿಂದ ಕೂಡಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸೂರ್ಯಕಾಂತಿಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸತ್ತ ಕವಿಯ ನೆನೆದು ಅಳುವ ದೇವರು..: ಎಸ್. ಜಯಶ್ರೀನಿವಾಸ ರಾವ್ ಸರಣಿ

ಲ್ಯಾಟ್ವಿಯಾದ ಪ್ರಮುಖ ಕವಿ ಮಾರಿಸ್ ಸಲೇಯ್ಸ್-ರ ಪ್ರಕಾರ ರೊನಲ್ಡ್ಸ್ ಬ್ರಾಯ್ಡಿಸ್-ರು ತಮ್ಮ ನಾಲ್ಕನೆಯ ಸಂಕಲನ “ಜೀರೋ ಸಮ್”-ನಲ್ಲಿ ತಮ್ಮ ಹಿಂದಿನ ಕವನ ಸಂಕಲನಗಳ ಪ್ರತಿಧ್ವನಿಗಳನ್ನು ಸಮತೋಲಿತ ವಿನ್ಯಾಸದಲ್ಲಿ ಹೊಸ ಮೋಟೀಫ಼್-ಗಳೊಂದಿಗೆ ಸಂಯೋಜಿಸುವ ಮೂಲಕ ತನ್ನ ಕಾವ್ಯ-ಕಾರ್ಯದ ಒಂದು ಹಂತಕ್ಕೆ ಮುಕ್ತಾಯದ ಗಂಟು ಹಾಕುತ್ತಾರೆ. ಆದರೆ ನಗುವಿನ ಮೂಲ ಸ್ವರೂಪ ಮತ್ತು ನಗುವ ಸಾಮರ್ಥ್ಯದ ಪ್ರಶ್ನೆಯು ಇಲ್ಲಿಯೂ ಕೇಂದ್ರದಲ್ಲೇ ನೆಲೆಸಿದೆಯೆಂದನ್ನುತ್ತಾರೆ ಸಲೇಯ್ಸ್.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಭೂಮಿಯ ಆಳದ ಪಥದಲ್ಲಿ ಚಲಿಸುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಅವರ ಕಾವ್ಯದಲ್ಲಿ ಕ್ರಿಸ್ತನ ಕ್ರೂಶಾರೋಹಣ, ಐಸಾಕ್-ನ ತ್ಯಾಗ ಮತ್ತು ಇತರರ, ಹಾಗೂ ತನ್ನ ಸ್ವಂತ ಸಾವಿನ ದೃಶ್ಯಗಳು, ಹಾಗೂ ಪ್ರಾಣಿಗಳ ವಧೆ ಮತ್ತು ದೇಶೀಯ ಜೀವನದ ಅಭಿವ್ಯಕ್ತಿಯಾಗಿ ಬಿಡಿಸಿದ ಚಿತ್ರಗಳೊಂದಿಗೆ ಸಂಯೋಜಿಸಲಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಲಿಥುವೇನಿಯಾ ದೇಶದ ಕವಿ ಶಿಗಿತಾಸ್ ಪಾರೂಲ್‌ಶ್ಕಿಸ್‌ರ (Sigitas Parulskis) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ