Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ವಿಚಿತ್ರ ರಸ್ತೆಗಳಲ್ಲಿ ಚಲಿಸುವ ಕಾವ್ಯ: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಶೀರ್ಷಿಕೆಯಲ್ಲಿ ‘happiness’ ಪದ ಇದ್ದಾಗ್ಯೂ, ಇದು ಸಂತೋಷದ ಕುರಿತಾದ ಕಾವ್ಯವಲ್ಲ. ದಣಿವು ಹೇಗೆ ಶೇಖರವಾಗುತ್ತದೆ, ಸಣ್ಣ ಸಣ್ಣ ಸನ್ನೆಗಳ ಕಡೆ ನಾವು ಹೇಗೆ ಗಮನ ಹರಿಸುತ್ತೇವೆ, ಸಂಘರ್ಷಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅಥವಾ ಮುಂದು ಹೋಗಲು ನಾವು ಕಾರಣವನ್ನು ಎಲ್ಲಿಂದ ಕಂಡುಕೊಳ್ಳುತ್ತೇವೆ ಎಂಬಂಥ ಪ್ರಶ್ನೆಗಳನ್ನು ಇಲ್ಲಿರುವ ಕವನಗಳು ಕೇಳುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

“ಮೀನು ಒಂದು ಪಿಟೀಲಾಗಿದ್ದಿದ್ದರೆ..”: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ರಾಕ್ಪೆಲ್ನಿಸ್‌ರ ಪ್ರಕಾರ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ, ಬೂದು ಬಣ್ಣದ ಗುಬ್ಬಚ್ಚಿ, ‘ರೊಮ್ಯಾಂಟಿಸಿಸಂ-ನ ನೀಲಿ ಹೂವು,’ ನಮ್ಮ ನಮ್ಮ ಸ್ವಂತ ಅಸ್ಮಿತೆಗಳು – ಇಂತಹವುಗಳನ್ನು ಮರುಪಡೆಯಲು ಯತ್ನಿಸುವ ಮುನ್ನ ಭಾಷೆಯ ಕುದುರೆ ಲಾಯಗಳನ್ನು ಮೊದಲು ಸ್ವಚ್ಛಗೊಳಿಸಬೇಕು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

“ಹಿಂದಿನಷ್ಟು ಭಾರವಾಗಿಲ್ಲ ನನ್ನ ಆತ್ಮ”: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಅವರ ಕಾವ್ಯ ಭಾಷೆಯು ವಿವಿಧ ಭಾಷಾ ಸಾಧನಗಳೊಂದಿಗೆ ಸಂಯಮದ, ಆದರೆ ಸೂಕ್ಷ್ಮಚಿತ್ರಕಾರ್ಯದ ವಿನೋದತೆಯನ್ನು (filigree game) ತೋರಿಸುತ್ತದೆ: ಭಾಷಾಪದಗಳ ವಿಭಿನ್ನ ಪದರಗಳು, ನವಪದಗಳು, ಹಳೆಯ ಪದಗಳು ಮತ್ತು ಸ್ಥಳೀಯ ಹೆಸರುಗಳ ಬಳಕೆ ಕಾವ್ಯದ ಸಾಲುಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಪ್ರದರ್ಶಿಸಲಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಮಾರಿಸ್ ಸಲೇಯ್ಸ್‌ರ(Māris Salējs) ಕಾವ್ಯದ ಕುರಿತ ಬರಹ

Read More

ಜೀವನ ಬಿಂಬದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಚೆಪಾವ್ಸಕಾಯ್ಟೆಯವರು ನೆಲದ ಮೇಲೆ ಭದ್ರವಾಗಿ ನಿಂತಿರುವ ಕವಿ. ಅವರ ರೂಪಕಗಳು ಒರಟಾಗಿರುತ್ತವೆ, ಮಣ್ಣಿನ ಕಂಪು ಸೂಸುತ್ತವೆ, ಕೆಲವೊಮ್ಮೆ ಸರ್ವೇಸಾಮಾನ್ಯವಾಗಿರುತ್ತವೆ. ಯಾವ ವಿಷಯವೂ ಅವರನ್ನು ಬುಡಸಮೇತ ಕಿತ್ತುಹಾಕಲು ಅಥವಾ ಸ್ವರ್ಗಕ್ಕೆ ಏರಿಸಲು ಸಾಧ್ಯವಿಲ್ಲ. ಅವರ ಕಾವ್ಯ ಪ್ರಪಂಚ ವಿಶೇಷವಾಗಿ ಬೆಚ್ಚನೆಯ ಹಿತವಾದ ಪ್ರಪಂಚ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ನಿಯಂತ್ರಿತ ಕ್ರೋಧದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ