ನೆದರ್‌ಲ್ಯಾಂಡ್ಸ್ ಸಂಕೀರ್ಣತೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ
