Advertisement
ಕೆ.ವಿ. ತಿರುಮಲೇಶ್

ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.

ಮಣ್ಣಿನ ವಾಸನೆ ಮತ್ತು ವಸ್ತುಪ್ರತಿರೂಪ ವಿಚಾರ: ಕೆ. ವಿ. ತಿರುಮಲೇಶ್ ಲೇಖನ

“ಕವಿಯ ಒಳಗು ಪೂರ್ತಿ ಹೊರಗಿನಿಂದ ಮುಕ್ತವಲ್ಲ ಎನ್ನುವುದಕ್ಕೆ ಈ ಮಾತು. ಇಂಥ ಅಂತರಂಗಕ್ಕೆ ಪ್ರತಿಮಾಲೋಕದ ಮೂಲಕ ಅಭಿವ್ಯಕ್ತಿ ಕೊಡುವುದೇ ಸೃಷ್ಟಿಕ್ರಿಯೆ. “ಕವಿಯ ಅಥವಾ ಕಲೆಗಾರನ ಕೆಲಸ ತನ್ನ ಅನುಭವಕ್ಕೆ ತಕ್ಕ ವಸ್ತುಪ್ರತಿಲೋಕವನ್ನು ಸೃಷ್ಟಿಸುವುದು. ಈ ಅರ್ಥದಲ್ಲಿ ಕವಿ ‘ನೂತನ ಬ್ರಹ್ಮ’ನಲ್ಲದೆ ಅಘಟಿತ ಘಟನೆಗಳನ್ನು ಕಲ್ಪಿಸುವುದರಿಂದ ಅಲ್ಲ.”

Read More

ಸಾಹಿತ್ಯದ ನಿಷಿದ್ಧ ವಲಯ: ಕೆ.ವಿ. ತಿರುಮಲೇಶ್ ಲೇಖನ

“ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ.”

Read More

ಕವಿತೆಯ ಕುರಿತು: ಕೆ. ವಿ. ತಿರುಮಲೇಶ್ ಬರೆದ ಲೇಖನ

“ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ…”

Read More

ತರ ತರದ ತರಕಾರಿ: ಕೆ.ವಿ. ತಿರುಮಲೇಶ್ ಲೇಖನ

“ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು…”

Read More

ಶಿಶುನಾಳ ಶರೀಫರ ಕಾವ್ಯ: ಕೆ. ವಿ. ತಿರುಮಲೇಶ್ ಲೇಖನ

“ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ