Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್.‌ ಸುಜಾತಾ ಮುನ್ನುಡಿ

Read More

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ನಮಗೊಂದು ಸೊಸೆ ಬೇಕು: ಕೆ. ಸತ್ಯನಾರಾಯಣ ಹೊಸ ಕಾದಂಬರಿಯ ಆಯ್ದ ಭಾಗ

ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್‌ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ನಮಗೊಂದು ಸೊಸೆ ಬೇಕು” ಕೃತಿಯ ಆಯ್ದ ಭಾಗ

Read More

ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ

ಹನ್ನೆರಡು ದಿನಗಳ ನಂತರ ಆಸ್ಪತ್ರೆಯಿಂದ ಮರಳಿ ಬಂದಾಗ ಲತಕ್ಕ ಹೇಳಿದಂತೆ ಹೊಸ ಬದುಕು ಶುರುವಾಯಿತು. ಸೌಮ್ಯಳಿಗೆ ನಿಶ್ಯಕ್ತಿ, ಜ್ವರವಿತ್ತು. ಅದಲ್ಲದೆ ಅವಳು ಯಾರಲ್ಲೂ ಒಂದಕ್ಷರವೂ ಮಾತಾಡುತ್ತಿರಲಿಲ್ಲ. ಏನು ಹೇಳಿದರೂ, ಕೇಳಿದರೂ ಒಂದೋ ಮುಖ ತಿರುಗಿಸಿಕೊಂಡು ಮಲಗಿ ಬಿಡುತ್ತಿದ್ದಳು ಅಥವಾ ಮನೆಯ ಜಂತಿ ಕಾಣುತ್ತ ಸುಮ್ಮನಿರುತ್ತಿದ್ದಳು. ಶಾಕ್ ಆಗಿದೆ ಅವಳಿಗೆ, ಕ್ರಮೇಣ ಸರಿಯಾತ್ತ್ ಅಂದಿದ್ದರು ಲತಕ್ಕ. ಹೊತ್ತು ಕಂತುವುದನ್ನೇ ಕಾದು ಕೂತು ಮಿಣ್ಕು ಸಾಸ್ಮೆ, ಉಪ್ಪು, ಬೆಳ್ಳುಳ್ಳಿ ಸಿಪ್ಪೆ, ಈರುಳ್ಳಿ ಸಿಪ್ಪೆ, ಒಣಮೆಣಸಿನ ಚೊಟ್ಟು, ಎಲ್ಲ ಒಟ್ಟು ಮಾಡಿಕೊಂಡು ಮೊಮ್ಮಗಳಿಗೆ ಸುಳಿದು ಒಲೆಗೆ ಹಾಕಿ ಚಟಪಟಗುಟ್ಟಿಸಿ ದೃಷ್ಟಿ ತೆಗೆಯುತ್ತಿದ್ದಳು.
ವಿಜಯಶ್ರೀ ಹಾಲಾಡಿ ಕಥಾ ಸಂಕಲನ “ಉಮ್ಮಲ್ತಿ ಗುಡಿಯ ಸಾಕ್ಷಿ”ಯ ಕತೆ “ಚನ್ನೆಮಣೆ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ