ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್
“ಯಾವತ್ತೂ ತಲೆಯೆತ್ತಿ ಆಕಾಶ ನೋಡದವನು
ಅಮಾವಾಸ್ಯೆಯಲ್ಲಿ ಚಂದ್ರನ ಹುಡುಕಿದ್ದು ನನ್ನ ತಪ್ಪು
ಸುಲಭವಾಗಿ ಗಳಿಸುವ ಭ್ರಮೆಯಲ್ಲಿ ಬದುಕಿದ್ದೆ
ಮೀನು ಇರದ ಕೊಳಕ್ಕೆ ಬಲೆ ಬೀಸಿದ್ದು ನನ್ನ ತಪ್ಪು ” -ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Nov 21, 2025 | ದಿನದ ಕವಿತೆ |
“ಯಾವತ್ತೂ ತಲೆಯೆತ್ತಿ ಆಕಾಶ ನೋಡದವನು
ಅಮಾವಾಸ್ಯೆಯಲ್ಲಿ ಚಂದ್ರನ ಹುಡುಕಿದ್ದು ನನ್ನ ತಪ್ಪು
ಸುಲಭವಾಗಿ ಗಳಿಸುವ ಭ್ರಮೆಯಲ್ಲಿ ಬದುಕಿದ್ದೆ
ಮೀನು ಇರದ ಕೊಳಕ್ಕೆ ಬಲೆ ಬೀಸಿದ್ದು ನನ್ನ ತಪ್ಪು ” -ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್
Posted by ಕೆಂಡಸಂಪಿಗೆ | Nov 16, 2025 | ವಾರದ ಕಥೆ, ಸಾಹಿತ್ಯ |
ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು.
ಆನಂದ ಈ. ಕುಂಚನೂರ ಹೊಸ ಕಥಾ ಸಂಕಲನ “ನಿರೂಪ”ದ ಒಂದು ಕತೆ “ನಕ್ಷತ್ರ ದಾನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
Posted by ಕೆಂಡಸಂಪಿಗೆ | Nov 14, 2025 | Home page first slider, spotlight |
ಸಾವಿರಾರು ಮರಗಳ ನೆಟ್ಟು, ಅವುಗಳನ್ನು ಪೋಷಿಸಿ, ಅದರಿಂದಲೇ ಖ್ಯಾತರಾದ ಶತಾಯುಷಿ ಸಾಲುಮರದ ತಿಮ್ಮಕ್ಕ (೧೧೪) ಇಂದು ನಿಧನರಾದರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದ ಅವರು, ಪರಿಸರದ ಪಾಠಗಳನ್ನು ಶಾಲೆಯಲ್ಲಿ ಕಲಿತವರಲ್ಲವಾದರೂ, ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ, ಅವುಗಳ ಪೋಷಣೆಯಲ್ಲಿ ತಮ್ಮ ಜೀವನವನ್ನು ಕಳೆದವರು. ಇಂಥ ನಿಸ್ವಾರ್ಥ ಕಾರ್ಯಕ್ಕಾಗಿ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು.
Read MorePosted by ಕೆಂಡಸಂಪಿಗೆ | Nov 10, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್. ನಾಗಭೂಷಣ ಸ್ವಾಮಿ ಬರಹ
Posted by ಕೆಂಡಸಂಪಿಗೆ | Nov 9, 2025 | ದಿನದ ಅಗ್ರ ಬರಹ |
‘ಈ ಮಹಾರಾಯನ ಕೊರೆತದಿಂದ, ನಾನು ಬೇರೆಯವರಿಗೆ ಎಷ್ಟು ಕೊರೆಯುತ್ತಿದ್ದೆ ಎಂಬ ಅರಿವಾಗಿದೆ. ಪಾಪ! ನನ್ನ ಸೊಸೆ ಚಿನ್ನದಂಥಾ ಹುಡುಗಿ. ಎಲ್ಲವನ್ನೂ ಸಹಿಸಿದ್ದಾಳೆ. ಈತನ ಕೊರೆತ ತಪ್ಪಿಸಿಕೊಳ್ಳಲು ಸೊಸೆಯನ್ನೇ ಮೊರೆ ಹೋಗಬೇಕು’ ಎಂದು ಮನದಲ್ಲೇ ನಿರ್ಧರಿಸಿದರು. ಮರುದಿನ ಬೆಳಿಗ್ಗೆ ನಂದಿನಿ ನಿತಿನ್‌ನನ್ನು ಶಾಲೆಗೆ ಒಯ್ಯಲು ಸಿದ್ಧಳಾದಾಗ ರಾಯರು ಅವಳಲ್ಲಿಗೆ ಬಂದರು. ಶಾಸ್ತ್ರಿಗಳು ಎಲ್ಲೂ ಕಾಣಿಸಲಿಲ್ಲ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ “ಉಭಯ ಸಂಕಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
