Advertisement
ಎಂ.ಜಿ. ಶುಭಮಂಗಳ

ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ.

ಪ್ರೋಗ್ರೆಸ್: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ

“‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ.”

Read More

ಮೋಕ್ಷ ಸ್ನಾನ ಇಂಗ್ಲಿಷ್ ಮೂಲ: ಆರ್.ಪಿ. ಸಿಸೋಡಿಯಾ ಕನ್ನಡಕ್ಕೆ: ಎಂ.ಜಿ. ಶುಭಮಂಗಳ

“ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು…”

Read More

ತಬ್ಬಲಿಗಳು: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕತೆ

“ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು.”

Read More

ದಾರಿ ತಪ್ಪಿದ ಕನಸು: ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

“ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು.”

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ