Advertisement
ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

“ಗೊತ್ತಿದ್ದೂ ಬೇಡಿದುದರ ಫಲ;
ದಿಕ್ಕು ತಪ್ಪಿಸಿದ ಕೈಗಳು..
ಮಡಿಲೊಳಗಿರೊ ಹಸುಕಂದನ ಬದಿಗೊತ್ತಿ
ಉರುಳಾಡ ಬಯಸಿದ ಮೈಗಳು.
ದೌರ್ಜನ್ಯಕ್ಕೆ ಮನ ಧಿಕ್ಕಾರವೆನ್ನುತ್ತಿರಲು,
ಅಪ್ಪನಿಲ್ಲದ ಹಸುಗೂಸ ಆರೈಕೆಗಾಗಿ,
ವಿಧಿಯಿರದೆ ಒಪ್ಪಿಕೊಂಡ,
ಇನ್ನೊಬ್ಬನ ಮೈ ಅಪ್ಪಿಕೊಂಡ ನಾನು
ವ್ಯಭಿಚಾರಿ ಹೂವಷ್ಟೇ..!!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

Read More

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

“ಮನೆಗೆ ಬಂದ ಹೊಸ ನಾಯಿಗೂ
‘ಕಿವಿ’ಯೆಂದೇ ಹೆಸರು!
ಮೂಡಿಗೆರೆಯ ಬೀದಿಯೊಕ್ಕರೆ
ಪೂರ್ಣಚಂದ್ರನದೇ ಉಸಿರು.
ಬೇಲಿಯ ಮೇಲಿನದು ಹೂವೇ ಇರಲಿ
ಹಾರುವ ಓತಿಯ ಕಲ್ಪನೆ ಅರಳುತ್ತದೆ!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

Read More

ಅವ್ವ ಸಾಮಾನ್ಯಳು, ಅಸಮಾನ್ಯಳು!: ಮನು ಗುರುಸ್ವಾಮಿ ಬರಹ

ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ.
ತಾಯಿಯ ಕುರಿತಾದ ಕವಿತೆಗಳ ಕುರಿತು ಮನು ಗುರುಸ್ವಾಮಿ ಬರಹ

Read More

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

“ಅರ್ಜುನ.. ಅಬ್ಬಾ! ಬಿಲ್ವಿದ್ಯೆ ಪ್ರವೀಣ!
ಶಿವನಿಂದ ಪಾಶುಪತಾಸ್ತ್ರ ಪಡೆದವನು.
ಸಕಾಲಕ್ಕೆ ಸಲ್ಲದ ಶಸ್ತ್ರಗಳ
ಒಡೆಯನಿಗೆ ಏನೆನ್ನಬೇಕೋ?”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

Read More

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

“ಈಗ ನೀನು ಗೆದ್ದೆಯೆಂದು ಬೀಗಬಹುದು;
ಅಕ್ಷರ ಸಹ ಗೆಲುವಿನ ರುಚಿ ಕಂಡಿಲ್ಲ ನೀನು!
ಅನುರಾಗ, ಅನುಬಂಧದ ಅಲೆಗಳೆದುರು
ಹೀನಾಯವಾಗಿ ಸೋತು ಬಿಟ್ಟೆ!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ