Advertisement
ಎಂ.ಎಸ್.ಶ್ರೀರಾಂ

ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು.  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ,  ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ.

ಭಿನ್ನ ಕೃತಿಗಳಿಂದ ಮರುನಿರೂಪಣೆಗೊಂಡ ಸ್ವತಂತ್ರ ಪುಸ್ತಕ

ಭಾರತೀಯ ರಿಸರ್ವ್ ಬ್ಯಾಂಕ್ ನ 21ನೇ ಗವರ್ನರ್ ಆಗಿ ಕಾರ್ಯನಿರ್ವಹಿಸಿರುವ ವೈ. ವಿ. ರೆಡ್ಡಿ ಅವರು ಆರ್ಥ ಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞರು. ಆಡಳಿತ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಸಕ್ರಿಯರಾಗಿದ್ದುದಷ್ಟೇ ಅಲ್ಲದೆ, ದೂರದೃಷ್ಟಿಯೊಂದಿಗೆ ವ್ಯವಸ್ಥೆಯನ್ನು ರೂಪಿಸಬಲ್ಲವರೂ ಹೌದು. ತಮ್ಮ ಆತ್ಮಚರಿತ್ರೆಯನ್ನು ತೆಲುಗಿನಲ್ಲಿಯೂ, ಇಂಗ್ಲಿಷ್ ನಲ್ಲಿಯೂ ಬರೆದರು. ಎರಡು ಪುಸ್ತಕಗಳನ್ನು ಗ್ರಹಿಸಿ, ಕಥೆಗಾರ ಎಂ.ಎಸ್ . ಶ್ರೀರಾಮ್ ಅವರು ಅನುವಾದಿಸಿದ್ದಾರೆ.

Read More

ಭಾರತಿ ಹೆಗಡೆ ಪುಸ್ತಕಕ್ಕೆ ಎಂ.ಎಸ್. ಶ್ರೀರಾಮ್ ಬರೆದ ಮುನ್ನುಡಿ

“ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು…”

Read More

ವಿಚಾರಗಳ ಸರಹದ್ದು ಮೀರುವ ಪೊನ್ನಾಚಿ ಕಥೆಗಳು:ಶ್ರೀರಾಮ್ ಮುನ್ನುಡಿ

“ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲ್ಪನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ.”

Read More

ತಂಜಾವೂರಿನ ಬೃಹದೀಶ್ವರ:ಶ್ರೀರಾಂ ಅಂಕಣ

ರಿಚರ್ಡ್ ಡಾಕಿನ್ಸ್‌ನ ಪುಸ್ತಕ  ಓದುತ್ತಲೇ ತಂಜಾವೂರಿಗೆ ಹೋದ ಕನ್ನಡದ ಕಥೆಗಾರ ಎಂ.ಎಸ್. ಶ್ರೀರಾಂ ಆ ದೇವರೆಂಬ ಮಿಥ್ಯೆಯ ಬಗ್ಗೆ ಇಲ್ಲಿ ಬರೆದಿದ್ದಾರೆ.

Read More

ಶ್ರೀರಾಮ್ ಡೈರಿ-ಗೆಂಟ್ ಕೋಟೆಯಲ್ಲಿ ಕೋಕಾಕೋಲಾ

ಗೆಂಟ್ ಪುಟ್ಟ ನಗರ. ಅಲ್ಲಿ ಸಣ್ಣ ರಸ್ತೆಗಳು. ಪುಟ್ಟ ಕಾರುಗಳು. ನಡೆದಾಡಿಯೇ ಊರು ಸುತ್ತಬಹುದು. ವೆನಿಸ್ಸಿನಂತೆ ಊರಿನ ಮಧ್ಯದಲ್ಲಿ ಒಂದು ನಾಲೆ, ಬೋಟಿನಲ್ಲಿ ಓಡಾಡಲೂಬಹುದು. ಹಳೆಯ ಹೊಸ ಕಟ್ಟಡಗಳು ಜೊತೆಜೊತೆಯಾಗಿ ನಿಂತಿವೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ