ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಷಿ ಸರಣಿ
ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೆರಡನೆಯ ಕಂತು
