Advertisement
ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ

ಏನೇ ಹೇಳಿ, ಆ ಕಾಡು ಮಧ್ಯದ ಪುಟ್ಟ ಶಾಲೆಯಲ್ಲಿ ಓದುವಾಗಿನ ಆ ನೆನಪುಗಳು ನಿಜಕ್ಕೂ ಚಿರಸ್ಮರಣೀಯ. ನಮ್ಮನೆಯಿಂದ ಶಾಲೆ ಸುಮಾರು ಎರಡು ಕಿ.ಮೀ. ನಷ್ಟು ದೂರವಿತ್ತು. ಎರಡು ಸೊಪ್ಪಿನ ಬೆಟ್ಟ ದಾಟಿ, ಒಂದು ಗುಡ್ಡ ಏರಿಳಿದರೆ, ನಮ್ಮ ಶಾಲೆ. ಮಳೆಗಾಲದಲ್ಲಿ ಒಂದು ಪುಟ್ಟ ಕಾಲುವೆ ದಾಟಬೇಕಾಗುತ್ತಿತ್ತು. ಹೆಚ್ಚು ಕಮ್ಮಿ ಮಾರಗಲವಿದ್ದ ಆ ಕಾಲುವೆ, ಅಂಥ ಭಯಂಕರ ಕಾಲುವೆಯೇನೂ ಆಗಿರಲಿಲ್ಲ. ಅದೂ ಕೂಡಾ ನಮ್ಮ ಬಾಲ್ಯದ ಸಂಗಾತಿಯಂತೇ ನಮ್ಮ ಖುಶಿಯಲ್ಲಿ ಪಾಲು ಪಡೆದಿತ್ತು.
ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ

Read More

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ