ಇಲ್ಲಿ ಎಲ್ಲ ಥರದವರೂ ಇದ್ದಾರೆ…: ಎಸ್ ನಾಗಶ್ರೀ ಅಜಯ್ ಅಂಕಣ
ಇದು ಸರಿತಪ್ಪಿನ ತಕ್ಕಡಿಯಲ್ಲಿ ತೂಗಲಾರದ, ತೂಗಬಾರದ ವಿಷಯ. ವಿಧಿ ಒಬ್ಬೊಬ್ಬರ ಪಾಲಿಗೆ ನೀಡಿದ ಷಡ್ರಸಗಳ ಭೋಜನ. ಅವರುಂಡ ಸಿಹಿ-ಕಹಿ-ಹುಳಿ- ಒಗರು ಅವರಿಗಷ್ಟೇ ವೇದ್ಯ. ಬಹಳಷ್ಟು ಸಲ ನಾವು ದೂರ ನಿಂತು ಕಂಡಿದ್ದರ ಬಗ್ಗೆ, ಅನಿಸಿದ್ದರ ಬಗ್ಗೆ ಆತ್ಮವಿಶ್ವಾಸದಿಂದ ನಿರ್ಣಯಗಳನ್ನು ಹೊರಡಿಸುತ್ತೇವೆ. ದುಡ್ಡು ದುಡ್ಡು ಅಂತ ಸಾಯ್ತಾನೆ. ಹೋಗುವಾಗ ಹೊತ್ಕೊಂಡು ಹೋಗುವ ಹಾಗಿದ್ದರೆ ಇನ್ನು ಹೇಗಾಡ್ತಿದ್ದನೋ ಅಂದವರೆ ಚಿಲ್ಲರೆಗಾಗಿ ತಳ್ಳುಗಾಡಿಯವನ ಬಳಿ ಗುದ್ದಾಡುತ್ತಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಿಲ್ಲ ಎಂದ ಮಹಾಮಾತೆಯ ಮಕ್ಕಳು ಬಂದವರೆದುರೇ ಕಾಲುಚಾಚಿ ಕೂತು, ಮೂತಿ ತಿರುವುತ್ತಾರೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ
