Advertisement
ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೊಡು ಶಿವನೆ ಕುಡುಕನಲ್ಲದ ಗಂಡನ: ಸುಧಾ ಆಡುಕಳ ಅಂಕಣ

ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಅಮೃತವಾಹಿನಿಯೊಂದು ಹರಿಯುತಿದೆ: ಸುಧಾ ಆಡುಕಳ ಅಂಕಣ

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

Read More

ಎಲ್ಲ ನಿಮ್ಮ ಲೀಲೆ ತಾಯೇ…: ಸುಧಾ ಆಡುಕಳ ಅಂಕಣ

ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ನಡೆದ ಮಾರಾಮಾರಿ ಜಗಳದ ಕತೆ..
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಆರನೆಯ ಕಂತು ನಿಮ್ಮ ಓದಿಗೆ

Read More

ಸತ್ತವರೆಲ್ಲ ಮತ್ತೆ ಬಂದಾಗ: ಸುಧಾ ಆಡುಕಳ ಅಂಕಣ

ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ

ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ