Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ತೀರದಲ್ಲಿ ಹರಹಿಕೊಂಡ
ಮರಳಿನ ಕಣಗಳು
ಅವನಲ್ಲಿ ಅಗಾಧತೆಯ
ಅರಿವನ್ನು ಮೂಡಿಸುತ್ತವೆ
ಎನಗಿಂತ ಕಿರಿಯರಿನ್ನಿಲ್ಲ
ಎನ್ನುವಂತೆ ಮಾಡುತ್ತವೆ”- ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಪರಿಸರ ರಕ್ಷಣೆಯ ಕಠಿಣ ವಜ್ರ ನಮೀಬಿಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಬಟ್ಟೆ ಅಂಗಡಿಯಲ್ಲಿದ್ದ ಸುಮುಖ ಪ್ಯಾಂಟೊಂದರ ಕಡೆಗೆ ಕೈ ತೋರಿಸಿದ್ದ. ಬಟ್ಟೆ ತೋರಿಸುತ್ತಿದ್ದ ಯುವತಿ ಇವನು ಕೈತೋರಿಸಿದೆಡೆಗೆ ನೋಡಿದಳು. ಆರು ಜೇಬುಗಳು, ಸುತ್ತಮುತ್ತೆಲ್ಲಾ ಉದ್ದುದ್ದ ಬಳ್ಳಿ ಬೆಳೆದಂತಿದ್ದ ಗಿಲಿಗಿಲಿ ಪ್ಯಾಂಟೊಂದು ಅಲ್ಲಿತ್ತು. ಅದು ಸುಮುಖ ಯಾವಾಗಲೂ ಹೋಗುತ್ತಿದ್ದ ಬಟ್ಟೆ ಅಂಗಡಿ. ಅದರ ಮಾಲೀಕರಿಂದ ಹಿಡಿದು ಎಲ್ಲರನ್ನೂ ಪರಿಚಯವಿತ್ತು ಸುಮುಖನಿಗೆ. ಈಗ ಬಟ್ಟೆ ತೋರಿಸುತ್ತಿದ್ದ ಯುವತಿಯೂ ಸಹ ಇವನ ಪರಿಚಯದವಳೇ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಕತೆ “ಸುಮುಖ ಮತ್ತು ಗಾಂಧಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಯುದ್ಧದ ಬಿಸಿ ನೀಗಿಕೊಂಡು ತಂಪಗಾಗಬೇಕಿದೆ ರಷ್ಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಕಮ್ಯುನಿಸ್ಟ್‌ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್‌ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ