Advertisement

Category: ಅಂಕಣ

ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

“ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು.”

Read More

ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”

Read More

ಶರತ್ಕಾಲದ ಇಂಗ್ಲಿಷ್ ದಸರಾ: ಯೋಗೀಂದ್ರ ಮರವಂತೆ ಅಂಕಣ

“ನವರಾತ್ರಿ ಆರಂಭ ಆದಾಗಿನಿಂದಲೂ ಭಾರತೀಯ ಜನರ ಅಸ್ತಿತ್ವ ಇರುವ ಇಲ್ಲಿನ ಊರುಗಳೆಲ್ಲೆಲ್ಲ ದೇವಿಯರಿಗೆ ಹೂವು ಹಾರ ಅಲಂಕಾರ ಆರತಿಯ ಅರ್ಚನೆ ಆಗುತ್ತಿದೆ. ಬಣ್ಣ ಬಣ್ಣದ ಉಡುಗೆ ಉಟ್ಟ, ಆಕರ್ಷಕ ಸಿಂಗಾರ ಮಾಡಿಸಿಕೊಂಡ ದುರ್ಗೆ, ಶಾರದೆ, ಲಕ್ಷ್ಮಿ, ಸರಸ್ವತಿಯರು ಬ್ರಿಟನ್ನಿನ ಊರೂರುಗಳಲ್ಲಿ ಪೂಜೆ ಸ್ವೀಕರಿಸುತ್ತಿದ್ದಾರೆ. ಬ್ರಿಟನ್ನಿನ ಪ್ರತಿ ಪಟ್ಟಣದಲ್ಲೂ ಭಾರತೀಯರಿದ್ದಾರೆ ಮತ್ತು ಅಲ್ಲೆಲ್ಲ ದಸರಾದ ಸಂಭ್ರಮ ಕಂಡಿದೆ.”

Read More

ಯುವ ವಿಜ್ಞಾನಿಗಳ ಕತೆಗಳು: ಡಾ.ಲಕ್ಷ್ಮಣ ವಿ.ಎ ಅಂಕಣ

“ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ…”

Read More

ಹೆಣ್ಮನಗಳ ಕಾವ್ಯದ ಜಾಡು ಹಿಡಿದು: ಆಶಾ ಜಗದೀಶ್ ಅಂಕಣ

“ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ