ಪರದೇಶಿ ಕನ್ನಡಿಗರು, ಸ್ಥಳೀಯ ಕನ್ನಡ ಸಂಘಗಳ ಜುಗಲ್ ಬಂದಿ
ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’
