ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ
ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ
