Advertisement

Category: ದಿನದ ಪುಸ್ತಕ

ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್: ರಘುಪತಿ ತಾಮ್ಹನ್‌ಕರ್ ಅನುಭವ ಕಥನ

ಮೈಸೂರಿನ ರಘುಪತಿ ತಾಮ್ಹನ್‌ಕರ್ ಅವರ ಮೊದಲ ಕೃತಿ ‘ನೋಟಿನ ನಂಟು’ ಇದೇ ಭಾನುವಾರ ಅಂದರೆ ಜುಲೈ 7ರಂದು ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ. ಗಣೇಶ ಅಮೀನಗಡ ಅವರು ತಮ್ಮ ಕವಿತಾ ಪ್ರಕಾಶನದ ಮೂಲಕ ಇದನ್ನು ಪ್ರಕಟಿಸಿದ್ದಾರೆ. ಎಪ್ಪತ್ತು ವರ್ಷದ ರಘುಪತಿ ಅವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್. ಅವರು ತಮ್ಮ ಅನುಭವಗಳನ್ನು ಕಟ್ಟಿಕೊಟ್ಟ ಕೃತಿಯ ಒಂದು ಅಧ್ಯಾಯ ನಿಮ್ಮ ಓದಿಗಾಗಿ

Read More

ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ

ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ

Read More

ನಡು ಮಧ್ಯಾಹ್ನದ ಕಣ್ಣಿನ ಕಾವ್ಯ…: ವಿ.ಚಂದ್ರಶೇಖರ ನಂಗಲಿ ಬರಹ

‘ಅಡುಗೆಯಾಟದ ಹುಡುಗಿ’ ಬಾಲ್ಯದ ಅಡುಗೆಯಾಟವೇ ಕ್ರಮೇಣ ಆ ಹುಡುಗಿಯ ಜೀವನಶೈಲಿಯಾಗಿ ಬದಲಾಗುವ ಮತ್ತು ವ್ಯಕ್ತಿತ್ವ ವಿಕಸನದ ಅವಕಾಶಗಳು ಮುಚ್ಚಿಹೋಗುವ ಬಗೆಯೊಂದು ಅನಾವರಣಗೊಳ್ಳುತ್ತಾ , ಕಡೆಗೆ ಅಮ್ಮನಿಂದ ಮಗಳಿಗೆ ಹಸ್ತಾಂತರವಾಗುವ “ಚುಚ್ಚುಗ”ವು ಬರಿಯ ಅಡುಗೆಯ ಆಯುಧವಾಗಿ ಉಳಿಯದೆ, ಹೆಣ್ಣಿನ ಪಾಲಿಗೆ ಪುರುಷ ಪ್ರಧಾನ ಸಮಾಜದ “ಚುಚ್ಚುಗ”ವಾಗುವ ರೂಪಕ ಆಗಿಬಿಡುತ್ತದೆ.
ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಡಾ. ವಿ.ಚಂದ್ರಶೇಖರ ನಂಗಲಿ ಬರಹ

Read More

ತಾರಿದಂಡೆ – ಕಳೆದು ಹೋದ ಬದುಕಿನ ಸುಂದರ ಯಾನ: ಶ್ವೇತಾ ಹೊಸಬಾಳೆ ಬರಹ

ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
ಜಯಂತ ಕಾಯ್ಕಿಣಿಯವರ “ತಾರಿದಂಡೆ” ಕೃತಿಯ ಕುರಿತು ಶ್ವೇತಾ ಹೊಸಬಾಳೆ ಬರಹ

Read More

ಓದಿನ ಧ್ಯಾನದ ನಂತರವೂ ಕಾಡುವ ಕತೆಗಳು: ಮಾರುತಿ ಗೋಪಿಕುಂಟೆ ಬರಹ

ಅರ್ಧ ನೇಯ್ದಿಟ್ಟ ಸ್ವೆಟರ್ ಯೋಧನ ಕುಟುಂಬದ ಬದುಕಿನ ಅನಾವರಣ. ಇಲ್ಲಿ ಮಹಿಳೆಯೊಬ್ಬಳ ಮಾನಸಿಕ ತುಮುಲಗಳ ಸಾಮಾಜಿಕ ಬೇಕು ಬೇಡಗಳ ಒಳಗೊಳ್ಳುವಿಕೆ ಮತ್ತು ಅದನ್ನು ಮೀರುವ ಆಕೆಯ ಕನಸು ಹರಿಯನ್ನು ಕಾಣುವ ತವಕದೊಂದಿಗೆ ಮೂರ್ತರೂಪ ಪಡೆದು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.
ಸದಾಶಿವ ಸೊರಟೂರು ಅವರ ಕಥಾ ಸಂಕಲನ “ಧ್ಯಾನಕ್ಕೆ ಕೂತ ನದಿ”ಯ ಕುರಿತು ಮಾರುತಿ ಗೋಪಿಕುಂಟೆ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ