ಕನ್ನಡ ಪ್ರಬಂಧಲೋಕದ ಹೊಸ ಕಿಟಕಿ
ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.
ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ
