Advertisement

Category: ದಿನದ ಪುಸ್ತಕ

‘ಚೆನ್ನಭೈರಾದೇವಿ’ಯೆಂಬ ಧೀರೋದಾತ್ತ ಕಥಾನಕ

“ಒಂದು ಕತೆಗೆ ಚರಿತ್ರೆಯ ಹಿನ್ನಲೆಯಿದ್ದಾಗ ನೆಲದ ಮಹಿಮೆಯಿದ್ದಾಗ ಹೀಗೆ ಅದು ಮನಸ್ಸನ್ನು ತಟ್ಟುತ್ತದೆ ಎಂಬುದು ಮೇಲ್ನೋಟಕ್ಕೆ ಅನ್ನಿಸಿದರೂ ಬರಹಗಾರ ತನ್ನ ಸರಳ ಸಭ್ಯ ಹಾಗೂ ಆಕರ್ಷಕ ಶೈಲಿಯಿಂದ ಓದುಗರ ಹೃದಯಕ್ಕೆ ಇಳಿಯುವಂತೆ ಮಾಡುತ್ತಾನೆ ಅನ್ನುವುದು ನನಗಂತೂ ನಿಜ. ಹಾಗಿಲ್ಲದಿದ್ದರೆ ಚರಿತ್ರೆಯ ಪುಸ್ತಕಗಳೆಲ್ಲವೂ ಹೀಗೇ ಪ್ರಿಯವೆನಿಸಬೇಕಿತ್ತು. ಆದರೆ ಮತ್ತೆ ಮತ್ತೆ ಚರಿತ್ರೆಯನ್ನು ಎಲ್ಲರೂ ಕತೆಯ ರೂಪದಲ್ಲಿ ಹೇಳಲು ಸಮರ್ಥರಲ್ಲ ಅನ್ನಿಸುವುದು ಅತ್ಯಪರೂಪವಾಗಿ ಬರುವ ಇಂತಹ ಪುಸ್ತಕಗಳಿಂದ.”
ಡಾ. ಗಜಾನನ ಶರ್ಮ ಬರೆದ ಚೆನ್ನಭೈರಾದೇವಿ ಕಾದಂಬರಿ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ವಿಶ್ಲೇಷಣೆ

Read More

ಅನುಭಾವ ಲೋಕದ ಮಹಾಬೆಳಗು

“ಎಷ್ಟು ಸರಳವಾದ ಪದಗಳನ್ನು, ಪೋಣಿಸುತ್ತಾ ತನ್ನ ನುಡಿ ರೂಪಕವನ್ನು ಕಟ್ಟಿಕೊಡುತ್ತಿದ್ದಾಳೆ ಈ ಲಲ್ಲಾ. ಹಕ್ಕಿ ಬೆಳಗಾದಾಗ ಗೂಡು ಬಿಟ್ಟು ತನ್ನ ನಿತ್ಯದ ಬದುಕಿಗಾಗಿ ಹೇಗೆ ತನ್ನ ರೆಕ್ಕೆಯನ್ನು ಮಾತ್ರ ನಂಬಿ ಹೋಗುತ್ತದೆಯೋ ಹಾಗೆ ಅಂತರಂಗದ ಗೆಳೆಯನನ್ನು ನಿನಗೆ ಬೇಕಾದ ಮಿತ್ರನನ್ನು ಹುಡುಕಿಕೋ ಎಂಬ ಸಾಲು ಅವಳ ಮನಸ್ಸಿನ ಹುಡುಕಾಟದ ತೀವ್ರತೆಯನ್ನು ತಿಳಿಸುತ್ತವೆ.”
ಡಾ. ವಿಜಯಾ ಗುತ್ತಲ ಅನುವಾದಿಸಿದ ಕಾಶ್ಮೀರಿ ಕವಯತ್ರಿ ಲಲ್ಲಾ ದೇಡ್‌ ಕವಿತೆಗಳ ಸಂಗ್ರಹ ‘ಎಲ್ಲ ಎಲ್ಲೆ ಮೀರಿ’ ಕುರಿತು ಪದ್ಮಶ್ರೀ ಎಂ ಬರಹ

Read More

ಮನಃಶಾಸ್ತ್ರೀಯ ಗುಣದ ಕಾದಂಬರಿ!

“ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.”
ನಟರಾಜ್‌ ಹುಳಿಯಾರ್‌ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ

Read More

ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’

“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ಮರಾಠವಾಡಾದ ದಲಿತನ ಆತ್ಮಕಥನ ಕುರಿತು ಸುಧಾ ಆಡುಕಳ ಬರಹ

“ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.”
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ