Advertisement

Category: ದಿನದ ಪುಸ್ತಕ

ಸ್ಮಿತಾ ಅಮೃತರಾಜ್‌ ಪುಸ್ತಕದ ಕುರಿತು ವಸುಂಧರಾ ಕದಲೂರು ಬರಹ

“ಇಲ್ಲಿನ ಬಹುತೇಕ ಲಲಿತ ಪ್ರಬಂಧಗಳು ನಿರೂಪಣೆಯ ಮಾದರಿಯಲ್ಲಿವೆ. ಅವು ವಾಚಾಳಿಯಾಗಿವೆ, ಸರಳವಾಗಿವೆ. ಸಹಜ ನಿಯತ್ತಿನಿಂದ ಕೂಡಿವೆ. ಮುಚ್ಚುಮರೆಯಿಲ್ಲದೆ ಲೇಖಕರ ಹಳವಂಡಗಳನ್ನು ಪೆದ್ದುತನ, ಮುಗ್ಧತೆಯ ಭಾವನೆಯ ಹರವನ್ನು ಇವು ಒಳಗೊಂಡಿವೆ. ಇಲ್ಲಿನ ಪ್ರಬಂಧಗಳಲ್ಲಿನ ಕೆಲವಾರು ವಸ್ತು ವಿಚಾರಗಳನ್ನು ದೈನಂದಿನ ಚಕ್ರದಲ್ಲಿ ನಾವು ಕಂಡಿದ್ದರೂ ವಿಶೇಷ ಗಮನ ಹರಿಸದೆ ಕಡೆಗಣಿಸಿರುತ್ತೇವೆ.”
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ ಕುರಿತು ವಸುಂಧರಾ ಕದಲೂರು ಬರೆದ ಲೇಖನ

Read More

ಬಿ.ಆರ್.‌ಎಲ್ ಕವನ ಸಂಕಲನದ ಕುರಿತು ಕಾತ್ಯಾಯಿನಿ ಕುಂಜಿಬೆಟ್ಟು ಬರಹ

“ಹರೆಯದಲ್ಲಿ ಹೃದಯ ಕದ್ದ ಈ ಹುಡುಗಿ ಕವಿಯ ಬಾಳಿನುದ್ದಕ್ಕೂ ವ್ಯಾಪಿಸಿಕೊಳ್ಳುತ್ತಾಳೆ. ನಿನ್ನೆಯಿಂದ ಹಿಂಬಾಲಿಸುತ್ತ ಕವಿಯ ಪ್ರತಿ ಇಂದಿಗೂ ಕನಸಾಗುತ್ತ ಕಲ್ಪನೆಯಾಗುತ್ತ ಅಗಣಿತ ನಾಳೆಗಳ ಹಾಳೆಗಳಲ್ಲಿ ಮತ್ತೆ ಮತ್ತೆ ಹೊಸತು ಹೊಸತಾಗಿ ಅರಳುತ್ತ ಕಲಾಕೃತಿಯಾಗುತ್ತ ಓದುಗರ ಚಿತ್ತದಲ್ಲಿ ಉಳಿಯುವ ಮದುವೆಯಾಗದ ಲಾಲಿತ್ಯದ ಶಾಲೀನ ಚಿರಯವ್ವನದ ಕವನಕನ್ನಿಕೆ. ಕಾವ್ಯ ವಿಮಶೆ೯ಯ ಭಾಷೆಯಲ್ಲಿ ‘ನವನವೋನ್ಮೇಷ ಶಾಲಿನಿ’.”
ಬಿ.ಆರ್. ಲಕ್ಷ್ಮಣರಾವ್‌ ಬರೆದ ‘ನವೋನ್ಮೇಷ’ ಕವನ ಸಂಕಲನದ ಕುರಿತು ಕಾತ್ಯಾಯಿನಿ ಕುಂಜಿಬೆಟ್ಟು ಬರಹ

Read More

ಧನಪಾಲ ನಾಗರಾಜಪ್ಪ ಅನುವಾದಿಸಿದ ಪುಸ್ತಕದ ಕುರಿತು ಡಾ. ಮೈತ್ರೇಯಿಣಿ ಬರಹ

“ಸೃಜನಶೀಲ ಸಾಹಿತ್ಯದ ಭಾಗವಾಗಿ ಪರಿಗಣಿಸಲ್ಪಡುವ ಅಬಾಬಿಗಳು ಅಂತಃಕರಣ, ಶಾಂತಿ ಮತ್ತು ಸೌಹಾರ್ದತೆಯ ಮೈಲಿಗಲ್ಲುಗಳಾಗಿವೆ. ಆತ್ಮನೀರಿಕ್ಷಣೆ ಮಾದರಿಯ ಆತ್ಮಾವಲೋಕನ ಮತ್ತು ಆತ್ಮಾನುಸಂಧಾನದ ಮಾದರಿಗಳಾದ ಅಬಾಬಿಗಳು ಹೊಸ ಚೈತನ್ಯಶೀಲ ಬದುಕಿಗೆ ದಾರಿದೀಪಗಳಾಗಿವೆ. ಆತ್ಮೋನ್ನತಿಗೆ ಮತ್ತು ಆತ್ಮಗೌರವದ ಉತ್ಕರ್ಷಕ್ಕೆ ಹುರಿಗೊಳಿಸುವ ಮಾನವೀಯ ಜಿಜ್ಞಾಸೆಗಳಿಂದ ಆವೃತ್ತವಾದ ಅಬಾಬಿಗಳು ಸಾರ್ವಕಾಲಿಕ ಮೌಲ್ಯಗಳನ್ನು ಗರ್ಭಿಕರಿಸಿಕೊಂಡಿವೆ.”
ತೆಲುಗಿನ ಕವಿ ಷೇಕ್ ಕರೀಮುಲ್ಲಾ ಬರೆದ ಅಬಾಬಿಗಳನ್ನು ಧನಪಾಲ ನಾಗರಾಜಪ್ಪ ‘ಬದರ್ʼ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಕುರಿತು ಡಾ. ಮೈತ್ರೇಯಿಣಿ ಬರಹ ನಿಮ್ಮ ಓದಿಗೆ.

Read More

ಭಾಗ್ಯರೇಖಾ ದೇಶಪಾಂಡೆ ಕಥಾಸಂಕಲನಕ್ಕೆ ಡಾ. ವಸುಂಧರಾ ಭೂಪತಿ ಬರೆದ ಮುನ್ನುಡಿ

“ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಪಂಜೆ ಮಂಗೇಶರಾಯರು ತಮ್ಮ ಸಣ್ಣಕಥೆಗಳನ್ನು ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಕಥಾಸಾಹಿತ್ಯ ಪರಂಪರೆಗೆ ನಾಂದಿ ಹಾಡಿದರು. ಪಂಜೆಯವರ ಸಮಕಾಲೀನರಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ರಚಿಸಿದವರು ನಂಜನಗೂಡು ತಿರುಮಲಾಂಬಾ ಮತ್ತು ಆರ್. ಕಮಲಮ್ಮನವರು, ತಿರುಮಲಾಂಬ ಅವರ ಸಚ್ಚರಿತ ಸುಧಾರ್ಣವ ಪೌರಾಣಿಕ ಕಥಾಸಂಕಲನದಿಂದ ಪ್ರಾರಂಭವಾಗುವ ಕನ್ವರೆ ಮಹಿಳಾ ಕಥಾಸಂಕಲನಕ್ಕೆ ಶತಮಾನ ಪೂರೈಸಿರುವುದು ಸ್ಮರಣೀಯ.”
ಭಾಗ್ಯರೇಖಾ ದೇಶಪಾಂಡೆ ಬರೆದ ‘ಪಾನಿಪೂರಿʼ ಹೊಸ ಕಥಾ ಸಂಕಲನಕ್ಕೆ ಡಾ. ವಸುಂಧರಾ ಭೂಪತಿ ಬರೆದ ಮುನ್ನುಡಿ

Read More

ಸುಧಾ ಆಡುಕಳ ಕಥಾಸಂಕಲನಕ್ಕೆ ಡಾ. ಎಲ್.ಸಿ. ಸುಮಿತ್ರಾ ಮಾತುಗಳು

“‘ಹೊಳೆ’ ಕಥೆಯಲ್ಲಿ ಕಾಡುನಾಶದಿಂದ ಹೊಳೆ ಬತ್ತಿಹೋಗುವ ಪರಿಸರದ ಚಿಂತನೆಯಿದೆ. ‘ಸತ್ಯದ ಬದುಕು’ ವ್ಯಕ್ತಿ ಸ್ವಾತಂತ್ರ್ಯವನ್ನು ಕೌಟುಂಬಿಕ ಸಂಬಂಧಗಳು ಮೊಟಕು ಮಾಡುವ, ನಿಯಂತ್ರಿಸುವ ರೀತಿಯನ್ನು ಹೇಳುತ್ತಲೇ ಅಲಕಾ ಎಂಬ ಹುಡುಗಿ ಮನೆಯಲ್ಲೂ, ಕೆಲಸ ಮಾಡುವ ಜಾಗೆಯಲ್ಲೂ ಹೇಗೆ ಒಂದು ಪರಿಕರವಾಗಿ ಬಳಸಲ್ಪಡುತ್ತಾಳೆ… ಕೊನೆಗೆ ಹೇಗೆ ಅವಳು ಭಾವನಾತ್ಮಕ ಬಂಧಗಳಿಂದ ಹೊರಬರುವ ಬಗೆಯನ್ನು ಚಿತ್ರಿಸುತ್ತದೆ. ‘ಕಥೆಯನ್ನರಸುತ್ತಾ’ ಎಂಬ ಕಥೆ ಹೊಸಬಗೆಯ ನಿರೂಪಣೆಯನ್ನು ಹೊಂದಿದೆ.”
ಸುಧಾ ಆಡುಕಳ ಅವರ ಚೊಚ್ಚಲ ಕಥಾಸಂಕಲನ ‘ಒಂದು ಇಡಿಯ ಬಳಪʼದ ಕುರಿತು ಡಾ. ಎಲ್.ಸಿ. ಸುಮಿತ್ರಾ ಅಭಿಪ್ರಾಯ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ