Advertisement

Category: ಪ್ರವಾಸ

ಮರಳಲ್ಲ ಇದು ಹಸಿರು ಹರಳು

ದೂರದಲ್ಲಿ ಏರುತ್ತಿದ್ದ ಕೆಂಪು ಧೂಳಿನ ಮೋಡದಿಂದ ಎದ್ದುಬಂದ ಜೀಪಿನಿಂದ ಹೊರಗಿಣುಕಿತ್ತೊಂದು ಹೊಂಗೂದಲಿನ ತೇರು. ಅಹ ದೇವತೆಯಂತೆ ಅವತರಿಸಿದ್ದಳು ಹದಿನಾರರ ಹುಡುಗಿ ಮಕಾಮಾಯಿ.   ನಮ್ಮ ಕತೆ ಕೇಳಿ, ನನ್ನ ಹಿಂದೆ ನಿಧಾನ ಬನ್ನಿ ಎನ್ನುತ್ತಾ ತಾನು ಮಾತ್ರ ಭರೆಂದು ಹಾರುತ್ತ, ಅಲ್ಲಲ್ಲಿ ಜೀಪು ನಿಲ್ಲಿಸಿಕೊಂಡು ನಮಗಾಗಿ ಕಾಯುತ್ತ, ಒಂದು ಸಮುದ್ರ ತೀರದ ಕಲ್ಲು ಹಾದಿಯ ಗುಡಿಸಿಲಿನಂತ ಜಾಗಕ್ಕೆ ಕರೆದೊಯ್ದಳು. ಅದು “ಪಾಪಕೋಲೇ” ಹಸಿರು ಮರಳ ದಂಡೆಯ ಹಾದಿಯ ಶುರುವಾತು. ಜಗದ ಜಗಲಿಯಲಿ ನಿಂತು ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿ ಹೆಗಡೆ ಹವಾಯಿ ದ್ವೀಪದ ಕುರಿತು ಬರೆದಿದ್ದಾರೆ .

Read More

ಸಾಟಿಯಿಲ್ಲದ ಸ್ಲೊವೇನಿಯಾ ಲೇಕ್ ಬ್ಲಡ್

ಪ್ರವಾಸದ ಹವ್ಯಾಸವಿರುವವರಿಗೆ ತಮ್ಮ ಪ್ರತಿಯೊಂದು ಪ್ರವಾಸದಲ್ಲೂ, ಒಂದಿಲ್ಲೊಂದು ಅನಿರೀಕ್ಷಿತ ಅನುಭವಗಳು ಆಗುವುದು ಖಚಿತ. ನಮಗೆ ಈ ಬಾರಿ ಇಸ್ರೇಲಿನಿಂದ ಬಂದಿದ್ದ ಪ್ರವಾಸಿಗರು ನಮ್ಮನ್ನು ಅವರಾಗಿಯೇ ಪರಿಚಯ ಮಾಡಿಕೊಂಡು, ನಾವು ಭಾರತೀಯರು ಎಂದು ತಿಳಿದ ಮೇಲೆ “ಇಸ್ರೇಲ್ – ಇಂಡಿಯಾ ಭಾಯಿ ಭಾಯಿ” ಎಂದು ಹೇಳಿ ಒಂದು ಅಪ್ಪುಗೆಯನ್ನು ಕೊಟ್ಟರು. ಅವರು ಭಾರತಕ್ಕೂ ಭೇಟಿ ನೀಡಿದ್ದರಂತೆ. “ವಾರಾಣಸಿಯ ಅನುಭವ ಪ್ರಪಂಚದ ಯಾವ ಭಾಗದಲ್ಲಿಯೂ ನನಗೆ ಸಿಕ್ಕಿಲ್ಲ..” ಎಂದು ಒಂದೈದು ನಿಮಿಷಗಳ ಕಾಲ ತಮ್ಮ ಭಾರತ ಪ್ರವಾಸದ ಮೆಲುಕು ಹಾಕಿದರು.  ʼದೂರದ ಹಸಿರುʼ ಅಂಕಣದಲ್ಲಿ ಗುರುದತ್‌ ಅಮೃತಾಪುರ ಸ್ಲೋವೇನಿಯಾ ಪ್ರವಾಸದ ಕುರಿತು ಬರೆದ ಲೇಖನ ಇಲ್ಲಿದೆ.

Read More

ಚಂಬಲ್‌ನ ಡಕಾಯಿತರು ಕಾಪಾಡಿದ ವಿಗ್ರಹಗಳು

ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು.  ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್‌ ನ ಡಕಾಯಿತರು  ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ.  ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ.

Read More

ಸವಾರಿ ಹೊರಡುವ ಮುನ್ನ ಕೇಳಿರಿ ಸಲಹೆಗಳನ್ನ

ಸ್ಥಳೀಯರ ಜೊತೆಗಿನ ಮಾತು ಪ್ರವಾಸದ ಹೊರಹನ್ನು ಮತ್ತಷ್ಟು ಹೆಚ್ಚಿಸಿ, ಮಾಹಿತಿಯೊದಗಿಸಿ ಅರ್ಥಪೂರ್ಣವೆನಿಸುತ್ತದೆ. ಹಾಗೆ ಮಾತನಾಡುವಾಗ ವೈಯಕ್ತಿಕ ಮಾಹಿತಿ ಕೊಡುವುದರಿಂದ ದೂರ ಉಳಿಯುವುದು ಮತ್ತು ಧಾರ್ಮಿಕ ಹಾಗು ಆಹಾರದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳದಿರುವುದು ಸ್ವಾಗತಾರ್ಹ. ಅರೆಬರೆ ರಾಜಕೀಯ ಜ್ಞಾನದಿಂದ ನಮ್ಮ ದೇಶದ ಬಗ್ಗೆ ಚೀಳು ಅಭಿಪ್ರಾಯ ಬರದಂತೆ ಮಾತನಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಬೇರೆಯವರ ಮಕ್ಕಳನ್ನು ಹಿರಿಯರ ಅನುಮತಿಯಿಲ್ಲದೆ ಮುದ್ದು ಮಾಡುವ ಬಗ್ಗೆ ಎಚ್ಚರಿಕೆ ಇರಬೇಕು. ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ  ಪ್ರವಾಸಕ್ಕೆ ಬೇಕಾದ ಸಲಹೆಗಳನ್ನು ನೀಡಿದ್ದಾರೆ. 

Read More

`ಜಗದ ಜಗಲಿಯಲಿ ನಿಂತು’: ವೈಶಾಲಿ ಪ್ರವಾಸ ಲೇಖನ ಮಾಲೆ ಆರಂಭ

ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಅಂಕಣದ ಮೊದಲ ಬರಹ ಇಲ್ಲಿದೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ