Advertisement

Category: ಅಂಕಣ

ಮನಸ್ಸಿನಂತೆ ಮಹದೇವ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸ್ವಲ್ಪ ಯಾಮಾರಿದರೂ, ಯಾರನ್ನಾದರೂ ನಿರಾಶೆ, ನಕಾರಾತ್ಮಕ ಮನಃಸ್ಥಿತಿಯ ಕುಳಿಯೊಳಗೆ ಸೆಳೆಯುವ ತಾಕತ್ತು ಅವರಿಗಿರುತ್ತದೆ. ಕೆಟ್ಟವರಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಹಾರೈಸುವುದಿಲ್ಲ. ಪರೋಪಕಾರಿಗಳಾಗಿಯೇ ಕಾಣುತ್ತಾರೆ. ಆದರೆ ನಿರಂತರ ನಿರಾಶೆ, ನೋವು, ದುಃಖದ ಕಥೆಗಳನ್ನೇ ನೆನಪು ಮಾಡಿಕೊಳ್ಳುತ್ತಾ, ಒಳ್ಳೆಯ ಬದಲಾವಣೆಯ ಸಾಧ್ಯತೆಯನ್ನೇ ಅಲ್ಲಗೆಳೆಯುತ್ತಾ ಬದುಕುವವರ ನಡುವೆ ಸಂತೋಷಪರ ವ್ಯಕ್ತಿಗಳು ಹೆಚ್ಚುಕಾಲ ಉಳಿಯಲಾಗುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಬಣ್ಣ, ರುಚಿ ಮತ್ತು ಪರಿಮಳ: ಮಾಲತಿ ಶಶಿಧರ್‌ ಅಂಕಣ

ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ವಿಶ್ವ ಕಪ್ 2023ರ ಮಾಹಿತಿಗಳು(2): ಇ.ಆರ್.‌ ರಾಮಚಂದ್ರನ್‌ ಅಂಕಣ

ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್‌ಗೆ ಸಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್‌ನ ಕುರಿತ ಬರಹ ನಿಮ್ಮ ಓದಿಗೆ

Read More

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್‌ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ