Advertisement

Category: ಅಂಕಣ

ಕೆಂಪೆಂದರೆ ಕೆಟ್ಟದ್ದೂ ಅಲ್ಲ… ಭಯವೂ ಅಲ್ಲ…: ಮಾಲತಿ ಶಶಿಧರ್‌ ಅಂಕಣ

ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. “ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ವೆಸ್ಟ್ ಇಂಡೀಸ್ ಕ್ರಿಕೆಟ್ – ಅಂದು, ಇಂದು: ಇ.ಆರ್. ರಾಮಚಂದ್ರನ್ ಅಂಕಣ

ಇಲ್ಲಿನ ಕ್ರಿಕೆಟ್ ಆಟ ಎಷ್ಟು ಮೇಲುಗೈ ಆಗಿತ್ತೆಂದರೆ ಇವರ ವಿರುದ್ಧ ಆಡುವುದಕ್ಕೇ ಟೀಮುಗಳು ಹೆದರುತ್ತಿದ್ದವು! ಇವರ ವೇಗದ ಬೋಲಿಂಗ್‌ನಲ್ಲಿ ಎಷ್ಟು ಶಕ್ತಿ ಇತ್ತೆಂದರೆ ಆಡುವುದು ಇರಲಿ, ರನ್ ಹೊಡೆಯುವುದು ಇರಲಿ, ಏಟು ತಿನ್ನದೆ ಹೇಗೆ ಆಡುವುದು? ಎಂಬ ಶಂಕೆ ಮನಸ್ಸಿನಲ್ಲಿ ಏಳುತ್ತಿತ್ತು. ಭಾರತದ ಆಲ್-ರೌಂಡರ್ ಬಾಪು ನಾದ್ಕರ್ಣಿ ಒಮ್ಮೆ ಹೀಗೆ ಹೇಳಿದ್ದರು…
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

Read More

ಪುನರಪಿ ಜನನಂ….: ವಿನತೆ ಶರ್ಮ ಅಂಕಣ

ಮೂಲನಿವಾಸಿಗಳಾದ ಅವರ ಸ್ಥಳ-ನಾಮ, ಸಂಸ್ಕೃತಿ, ಭಾಷೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಬ್ರಿಟಿಷರ ಪ್ರಯತ್ನಗಳಿಗೆ ಕೊನೆಯಿಲ್ಲವಾಗಿತ್ತು. ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಅವರ ಕುಟುಂಬಗಳಿಂದ, ಸಮುದಾಯಗಳಿಂದ ಬೇರ್ಪಡಿಸಿ ಅವರಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಾ, ಬ್ರಿಟಿಷ್ ಜೀವನ ರೀತಿಗಳಿಗೆ ಒಗ್ಗುವಂತೆ ಮಾಡಲಾಗಿತ್ತು. ಅವರ ಹೆಸರುಗಳ ಜೊತೆ ಅವರ ನೆಲೆಗಳ ಹೆಸರುಗಳೂ ಮರೆಯಾದವು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

“ಯಾಕ್‌ ಫೋನ್‌ ತಗೀಲಿಲ್ಲ..” ಅಂತ ಕೇಳೋದಿಲ್ಲ!: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಈ ಬೋರಿನ ಗಾಡಿಯ ರಹಸ್ಯ ಇನ್ನೂ ಬಗೆಹರಿಯಲಿಲ್ಲ. ಪಕ್ಕದ ಹೊಲದ ಗೌಡರಿಗೆ ಫೋನ್ ಮಾಡಿದಾಗ ಅದೊಂದು ಗಾಡಿ ಬೇರೆ ಎಲ್ಲೋ ಬೋರ್ ಹೊಡೆಯಲು ಬಂದಿದ್ದು ಸ್ವಲ್ಪ ಹೊತ್ತು ನಮ್ಮ ಹೊಲದಲ್ಲಿ ನಿಂತಿತ್ತು ಅಂತ ಹೇಳಿದರು. ಇವರನ್ನೇ ಫೋನ್‌ ಮಾಡಿ ಕೇಳಿದ್ದರೆ ಈ ಗುಡ್ಡಪ್ಪನ ಮಾತು ಕೇಳಿ ಇಷ್ಟು ಅಡ್ಡಾಟ ಮಾಡೋದು ತಪ್ಪುತಿತ್ತು ಅಂತ ನನಗೆ ನಾನೇ ಹಳಿದುಕೊಂಡೆ. ಆದರೂ ಅವನ ದೆಸೆಯಿಂದ ನನ್ನ ಹೊಲಕ್ಕಾದರೂ ಹೊಕ್ಕು ಬಂದೆನಲ್ಲ ಎಂಬ ಸಮಾಧಾನವೂ ಆಯ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಎದೆ ಹಿಂಡುವ ನೆನಪು…: ಎಸ್. ನಾಗಶ್ರೀ ಅಜಯ್ ಅಂಕಣ

ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ