Advertisement

Category: ಸಂಪಿಗೆ ಸ್ಪೆಷಲ್

ಒಮ್ಮೆ ಹಚ್ಚಿಕೊಂಡರೆ….: ಮಾಲಾ ಮ. ಅಕ್ಕಿಶೆಟ್ಟಿ ಬರಹ

ಎರಡು ದಿನದ ವಸ್ತಿಯ ನಂತರ ಮನೆಗೆ ತಲುಪುವವರೆಗೂ ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಯಾವ ಗಿಡಗಳು ಹೋದವು? ಆಕೆಯಂತೂ ಎಲ್ಲವೂ ಅಂದಳು, ಕೆಲವಾದರೂ ಉಳಿಯಬಾರದೇ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಅಂದು ಮನೆಯ ತಲುಪುವ ಹಾದಿಗುಂಟ ಬರುವಾಗ ನೋಡಿದರೆ ಎಲ್ಲವೂ ಬಟಾ ಬಯಲು, ಎರಡೂ ಕಡೆ ಎಲ್ಲ ಗಿಡಗಳನ್ನು ಕಿತ್ತಿದ್ದಾರೆ. ಇನ್ನು ನಮ್ಮದೇನು ಎನ್ನುತ್ತಾ ನಮ್ಮ ಮನೆಯ ಮುಂದೆ ಬಂದಾಗ ಎಲ್ಲ ಗಿಡಗಳು ಹೋಗಿ ಕೇವಲ ಎರಡು ಗಿಡ ಉಳಿದಿದ್ದವು.
ಮಾಲಾ ಮ. ಅಕ್ಕಿಶೆಟ್ಟಿ ಬರಹ ನಿಮ್ಮ ಓದಿಗೆ

Read More

ನಾನೊಬ್ಬಳು ಚಾಣಾಕ್ಷ ಹುಡುಗಿಯೇ ಆಗಿದ್ದೆ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಉಳಿದವರೆಲ್ಲ ಐದು ಪೈಸೆಗೆ ಒಂದರಂತೆ ಮಾರುತ್ತಿದ್ದರೆ, ನಾ ಮಾತ್ರ ‘ಆಣೆಗೊಂದ್ ಮಾಲೆ, ಯಾರಿಗ್ ಬೇಕು ತಗೊಳ್ರಿ, ತಗೊಳ್ರಿ ಆಣೆಗೊಂದ್’ ಎಂದು ವ್ಯಾಪಾರಕ್ಕಿಳಿಯುತ್ತಿದ್ದೆ. ‘ಅಲಾ ಅವ್ರ್‌ದೆಲ್ಲ ಬರೇ ಐದ್ ಪೈಸಾ. ನಿಂದೇನವ್ವಾ ಒಂದಾಣೆ?’ ಎಂದು ಕೇಳಿದ ಊರಿನವರಿಗೆಲ್ಲ, ‘ಹದಿನೇಳರಿಂದ ಇಪ್ಪತ್ತು ಸೇವಂತಿಗೆ ಹೂ, ಮಧ್ಯದಲ್ಲಿ ಬ್ಯಾಗಡಿ ನೋಡ್ರಿ, ಎಷ್ಟುದ್ದ ಐತಿ! ಒಂದು ಪೈಸೆ ಹೆಚ್ ಕೊಡ್ಬೇಕೊ ಬೇಡ್ವೋ?’ ಎನ್ನುತ್ತಿದ್ದೆ. ಕೇಳಿದವರು ಮಾಲೆಯನ್ನು ಕೊಂಡು, ಹುಡುಗಿ ಬಹಳ ಚುರುಕಿದ್ದಾಳೆಂದು ಶಭಾಸ್‌ಗಿರಿ ಕೊಡುತ್ತಿದ್ದರೆ, ಅಕ್ಕಪಕ್ಕದಲ್ಲಿದ್ದ ವ್ಯಾಪಾರಸ್ಥರು, ‘ಈಕಿ ಒಬ್ಬಾಕಿನೇನೊ ಜಾತ್ರಿಗ್ ಗೌರಿ!’ ಎಂದು ಮೂಗುಮುರಿಯುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ…: ತೇಜಸ್ವಿನಿ ಹೆಗಡೆ ಬರಹ

ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ “ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು… ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು… ಎಲ್ಲ ನನ್ನ ಹಣೆಬಹರ, ಕರ್ಮ” ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ.
ತೇಜಸ್ವಿನಿ ಹೆಗಡೆ ಬರಹ ನಿಮ್ಮ ಓದಿಗೆ

Read More

ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ ಪ್ರವಾಸ ಕಥನ

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ.
ಹೇಮಾ ನಾಯಕ ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಶತಾಯುಷಿ ಸಾಧಕಿಗೆ ಶತಕೋಟಿ ಪ್ರಣಾಮ!: ಕ್ಷಮಾ ವಿ. ಭಾನುಪ್ರಕಾಶ್ ಬರಹ

ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿದಂತೆ, ತಿಮ್ಮಕ್ಕ, ಗಿಡ-ಮರಗಳಲ್ಲಿ ಮಕ್ಕಳನ್ನು ಕಂಡು ಸಂತಸಪಟ್ಟವರು. ಪಾತಿ ಮಾಡಿ ಗಿಡ ನೆಡುವುದು, ಅವುಗಳೊಂದಿಗೆ ಮಾತಾಡುತ್ತಾ ನೀರುಣಿಸಿ, ತಲೆಸವರಿ ಅವುಗಳನ್ನು ಹೆಮ್ಮರವಾಗಿಸುವುದು – ತಿಮ್ಮಕ್ಕನವರ ಹವ್ಯಾಸವಲ್ಲ, ಅದು ಅವರ ಬದುಕಿನ ಸಾರ. ಹುಲಿಕಲ್ ಮತ್ತು ಕುಡೂರಿನ ನಡುವಿನ ಹೆದ್ದಾರಿಯ ಅಕ್ಕಪಕ್ಕ ೩೮೫ ಆಲದ ಮರಗಳನ್ನು ಹೀಗೆ ಬೆಳೆಸಿದ ಶ್ರೇಯವೇ, ತಿಮ್ಮಕ್ಕನನ್ನು ‘ಸಾಲುಮರದ ತಿಮ್ಮಕ್ಕ’ನನ್ನಾಗಿಸಿತು, ಗೌರವಾದರಗಳನ್ನು ಮನೆಬಾಗಿಲಿಗೆ ಬರಮಾಡಿಸಿತು!
ನೆನ್ನೆ ತೀರಿಕೊಂಡ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ