Advertisement

Category: ಸಾಹಿತ್ಯ

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಎಲ್ಲ ಧರ್ಮಗಳಾಚೆ ಮನುಷ್ಯರ ಮನಸ್ಸುಗಳು ಒಂದೇ ಆಗಿರುತ್ತವೆ! ಒಡವೆಗಳು ಸಂಕೋಲೆಗಳಾಗುವ ಹೊತ್ತಿಗೆ ಇಷ್ಟಪಟ್ಟು ಜೀಕಿದ ಜೋಕಾಲಿಯೇ ಎತ್ತಿ ದೂರ ಚಲ್ಲಿಬಿಡುತ್ತದೆ. ಇಷ್ಟೆಲ್ಲದರಾಚೆ ಹೊಂದಿಕೊಂಡು ಅವನೊಂದಿಗೆ ಸುಖವಾಗಿ ಎರಡು ಹೊತ್ತು ಉಂಡು ಆಕಾರವನ್ನೇ ಕಳೆದುಕೊಂಡು ನೆರಳಿನಂತೆ ಇದ್ದುಬಿಡುವುದು ನನಗೆ ಅಸಹ್ಯವೆನ್ನಿಸಲು ಶುರುವಾಗಿ ಎದ್ದು ತೌರುಮನೆಗೆ ತೌರು ಮನೆಯ ದಾರಿ ತುಳಿದಿದ್ದೆ.
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಬಿಡುಗಡೆ”

Read More

ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ

ಹನ್ನೆರಡು ದಿನಗಳ ನಂತರ ಆಸ್ಪತ್ರೆಯಿಂದ ಮರಳಿ ಬಂದಾಗ ಲತಕ್ಕ ಹೇಳಿದಂತೆ ಹೊಸ ಬದುಕು ಶುರುವಾಯಿತು. ಸೌಮ್ಯಳಿಗೆ ನಿಶ್ಯಕ್ತಿ, ಜ್ವರವಿತ್ತು. ಅದಲ್ಲದೆ ಅವಳು ಯಾರಲ್ಲೂ ಒಂದಕ್ಷರವೂ ಮಾತಾಡುತ್ತಿರಲಿಲ್ಲ. ಏನು ಹೇಳಿದರೂ, ಕೇಳಿದರೂ ಒಂದೋ ಮುಖ ತಿರುಗಿಸಿಕೊಂಡು ಮಲಗಿ ಬಿಡುತ್ತಿದ್ದಳು ಅಥವಾ ಮನೆಯ ಜಂತಿ ಕಾಣುತ್ತ ಸುಮ್ಮನಿರುತ್ತಿದ್ದಳು. ಶಾಕ್ ಆಗಿದೆ ಅವಳಿಗೆ, ಕ್ರಮೇಣ ಸರಿಯಾತ್ತ್ ಅಂದಿದ್ದರು ಲತಕ್ಕ. ಹೊತ್ತು ಕಂತುವುದನ್ನೇ ಕಾದು ಕೂತು ಮಿಣ್ಕು ಸಾಸ್ಮೆ, ಉಪ್ಪು, ಬೆಳ್ಳುಳ್ಳಿ ಸಿಪ್ಪೆ, ಈರುಳ್ಳಿ ಸಿಪ್ಪೆ, ಒಣಮೆಣಸಿನ ಚೊಟ್ಟು, ಎಲ್ಲ ಒಟ್ಟು ಮಾಡಿಕೊಂಡು ಮೊಮ್ಮಗಳಿಗೆ ಸುಳಿದು ಒಲೆಗೆ ಹಾಕಿ ಚಟಪಟಗುಟ್ಟಿಸಿ ದೃಷ್ಟಿ ತೆಗೆಯುತ್ತಿದ್ದಳು.
ವಿಜಯಶ್ರೀ ಹಾಲಾಡಿ ಕಥಾ ಸಂಕಲನ “ಉಮ್ಮಲ್ತಿ ಗುಡಿಯ ಸಾಕ್ಷಿ”ಯ ಕತೆ “ಚನ್ನೆಮಣೆ”

Read More

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ರಾಚನಿಕತೆಯ ಪ್ರಶ್ನೆ: ಎನ್.ಎಸ್.ಶ್ರೀಧರ ಮೂರ್ತಿ ಬರಹ

ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು.
ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಕುರಿತು ಎನ್.ಎಸ್.‌ ಶ್ರೀಧರಮೂರ್ತಿ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

Read More

ಆನಂದ ಈ. ಕುಂಚನೂರ ಬರೆದ ಈ ಭಾನುವಾರದ ಕತೆ

ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು.
ಆನಂದ ಈ. ಕುಂಚನೂರ ಹೊಸ ಕಥಾ ಸಂಕಲನ “ನಿರೂಪ”ದ ಒಂದು ಕತೆ “ನಕ್ಷತ್ರ ದಾನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ