Advertisement

Category: ದಿನದ ಪುಸ್ತಕ

ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.
ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅನುವಾದಿಸಿರುವ ‘ಒಂದು ಪುರಾತನ ನೆಲದಲ್ಲಿʼ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ವೈದ್ಯರ ಬದುಕಿನ ಪಡಿಪಾಟಲ ಕನ್ನಡಿ: ಕೊಟ್ರೇಶ್ ಅರಸೀಕೆರೆ ಬರಹ

ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.
ಡಾ. ಲಕ್ಷ್ಮಣ ವಿ.ಎ. ಕಾದಂಬರಿ ‘ಪಿ. ಎಚ್. ಸಿ ಕವಲುಗುಡ್ಡ’ ಕುರಿತು ಕೊಟ್ರೇಶ್ ಅರಸೀಕೆರೆ ಬರಹ

Read More

ಆವರಣ ಭಂಗ ಮಾಡಿಸುವ “ಪರಿಸರದ ಒಡನಾಟ”: ನಾರಾಯಣ ಯಾಜಿ ಬರಹ

ಯಾವುದೋ ಕಾಲದಲ್ಲಿ ‘ಮುದ್ದಳ’ ಎನ್ನುವ ಸಾಮಂತನಾಳಿದ ಈ ಊರಿನಲ್ಲಿ ಆತನ ನೆನಪು ಮರೆಯಾಗಿದೆ. ಆತನ ಅರಮನೆ ಇದೆ ಎನ್ನುವ ಜಾಗ ಅಸ್ಪಷ್ಟವಾಗಿ ಇದೆ. ಹಳ್ಳಿಗರ ಭಿತ್ತಿಯಲ್ಲಿ ಮಾಸಲು ತೊಡಗಿರುವ ಆ ಗುತ್ತುಗಳ ವಿಚಾರವನ್ನು ಹೇಳುತ್ತಲೇ, ತನ್ನ ಬಾಲ್ಯದ ಪರಿಸರದಲ್ಲಿ ಇದೀಗ ಮರೆಯಾಗುತ್ತಿರುವ ಹಳೆಯ ಕಾಡು, ಕರಡ ಹುಲ್ಲಿನ ಬೇಣ, ಒಳ್ಳೆ ಹಾವು, ವಿಷದ ಹಾವುಗಳೊಡನೆಯ ಬದುಕೆಲ್ಲವನ್ನೂ ಆಧುನಿಕ ಬದುಕು, ನಿಧಾನಕ್ಕೆ ಕಸಿಯತೊಡಗಿವೆ ಎನ್ನುವ ನೋವನ್ನು ಪರೋಕ್ಷವಾಗಿ ಲೇಖಕರು ತೋಡಿಕೊಳ್ಳುತ್ತಿದ್ದಾರೆ.
ಶಶಿಧರ ಹಾಲಾಡಿಯವರ “ಪರಿಸರದ ಒಡನಾಟ”ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ನಿತ್ಯ ಜಂಜಡದ ಸಣ್ಣ ಪುಟ್ಟ ಸಂಗತಿಗಳಲ್ಲಿ ಕತೆಗಳ ಹುಡುಕಾಟ: ಎಚ್ ಆರ್ ರಮೇಶ್‌ ಬರಹ

ಇಲ್ಲಿನ ಎಲ್ಲ ಕತೆಗಳ ಹಿಂದಿನ ಕಾಳಜಿ ಮನುಷ್ಯ ಎದುರಿಸುತ್ತಿರುವ ಬಿಕ್ಕಟ್ಟು, ಹಾಗೂ, ಮಾನಸಿಕವಾಗಿ ಉಸಿರುಗಟ್ಟಿಕೊಂಡು ಬಿದ್ದು ಒದ್ದಾಡುತ್ತಿರುವ ಇಕ್ಕಟ್ಟುಗಳಿಂದ ಪಾರಾಗಿ ಹಸನಾದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರ ಚಿತ್ರಣಗಳನ್ನು ಭಾಷೆಯಲ್ಲಿ ರೂಪಕಗಳಾಗಿ ಹಿಡಿದಿಡುವುದಾಗಿದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಶೃತಿ ಬಿ. ಆರ್ ಅವರು ತಮ್ಮೀ ಕತೆಗಳ ಮುಖೇನ ಹೊಸ ಸಾಧ್ಯತೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಶೃತಿ ಬಿ.ಆರ್. ಕಥಾ ಸಂಕಲನ “ಎಲ್ಲೆಗಳ ದಾಟಿದವಳು” ಕುರಿತು ಎಚ್.ಆರ್.‌ ರಮೇಶ್‌ ಬರಹ

Read More

ಭೂಮಾನುಭೂತಿಯ ಬರಹಗಳು: ನಾರಾಯಣ ಯಾಜಿ ಕೃತಿಯ ಕುರಿತ ಹರೀಶ್‌ ಕೇರ ಮುನ್ನುಡಿ

ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್‌ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಲೇಖನಗಳು ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ.
ನಾರಾಯಣ ಯಾಜಿ ಹೊಸ ಕೃತಿ “ಧವಳ ಧಾರಿಣಿ”ಗೆ ಹರೀಶ್‌ ಕೇರ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ