Advertisement

Category: ದಿನದ ಪುಸ್ತಕ

ಮಂಜುಳ ಡಿ. ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಬರಹ

ಲತಾ ಅವರ ಕಂಠದಿಂದ ಹೊರಹೊಮ್ಮಿದ ಮಧುರಗೀತೆಗಳು ಅವರನ್ನು ಸದಾ ಸ್ಮರಣೆಯಲ್ಲಿ ಹೊಂದಿರುವಂತಹದ್ದಾಗಿದ್ದು, ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಇನ್ನು ಹಿತ್ತಲ ಗಿಡ ಮದ್ದಲ್ಲ ಎಂಬ ಶೀರ್ಷಿಕೆಯ ಲೇಖನವೂ ಸಹ ಸೊಗಸಾಗಿದೆ. ಒಂದು ಸಾಧಾರಣ ಕಾಯಿಲೆಯನ್ನು ಗುಣಪಡಿಸಲು ನಮ್ಮ ಹೈಟೆಕ್ ಆಸ್ಪತ್ರೆಗಳು ಅದೆಷ್ಟು ಹಣ ಪೀಕಿಸುತ್ತವೆ, ಅದೇ ನಾಟಿವೈದ್ಯರು ಪರಂಪರಾಗತವಾಗಿ ತಮ್ಮ ಕೈಚಳಕದಿಂದ ಮತ್ತು ಅಪಾರ ಅನುಭವದಿಂದ ಕಾಯಿಲೆಯ ಮೂಲಕ್ಕೇ ಹೋಗಿ ರೋಗ ನಿವಾರಣೆ ಮಾಡುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.
ಮಂಜುಳ ಡಿ. ಅವರ “ಕೇದಿಗೆ ಗರಿ” ಅಂಕಣ ಬರಹಗಳ ಸಂಕಲನದ ಕುರಿತು ಎಂ.ಎನ್.ಸುಂದರ್ ರಾಜ್ ಬರೆದ ಲೇಖನ

Read More

ಅನ್ವೇಷಣೆ ನಿರತ ಅನವರತ ಚಿತ್ತಪಥದ ಕವಿತೆಗಳತ್ತ…

ನಿಜಾರ್ಥದ ಕವಿ ಗೊತ್ತಿರುವುದನ್ನು ವಿವರಿಸುವುದಿಲ್ಲ, ಅರ್ಥಮಾಡಿಕೊಂಡಿದ್ದನ್ನು ಅರ್ಥಮಾಡಿಸುತ್ತಾನೆ. ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಇಂದ್ರಕುಮಾರ್ ಎಚ್.ಬಿ. ಅವರ “ಬಾವಿಗ್ಯಾನವ ಮರೆತು” ಕವನ ಸಂಕಲನಕ್ಕೆ ಮಮತಾ ಆರ್. ಬರೆದ ಮುನ್ನುಡಿ

Read More

ಬೆಳದಿಂಗಳಂತೆ ತಾಗುವ ಕಥೆಗಳು

ಇಲ್ಲಿ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುವ ಮತ್ತು ಬದುಕಿನ ಬಗ್ಗೆ ಭವ್ಯ ಕನಸುಗಳನ್ನು ಕಟ್ಟಿಕೊಂಡಿರುವ ‘ಪೂರ್ವಿ’ ಎಂಬ ಮಗುವಿನ ತಾಯಿಯಾದ ನಳಿನಿಯು, ತನ್ನ ಗಂಡ ಅರವಿಂದನ ದೇಹ ಬಯಕೆಯನ್ನು ಈಡೇರಿಸಲು ಪ್ರತಿ ರಾತ್ರಿಯೂ ಹಿಂದೇಟು ಹಾಕುವುದಕ್ಕೆ ಅವರ ಬದುಕನ್ನು ಮುತ್ತಿಕೊಂಡಿರುವ ಆರ್ಥಿಕ ಸಮಸ್ಯೆಗಳೇ ಕಾರಣವಾಗಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆದರೆ ಕಡೆಗೂ ನಳಿನಿಯು ಆತನ ದೇಹ ಬಯಕೆಯನ್ನು ಈಡೇರಿಸಲು ಮುಂದಾಗುವ ಸಂದರ್ಭದಲ್ಲಿ ಎದುರಿಸುವ ಸಂದಿಗ್ಧಗಳೇ ಆಕೆ ಗುಲ್ ಮೊಹರ್ ಹುಡುಗನ ಕರಾಳ ಬದುಕಿನೊಂದಿಗೆ ಮುಖಾಮುಖಿಯಾಗುವುದಕ್ಕೆ ಕಾರಣವಾಗುತ್ತದೆ!
ಕಥೆಗಾರ ಅನಿಲ್‌ ಗುನ್ನಾಪೂರ ಬರೆದ “ಕಲ್ಲು ಹೂವಿನ ನೆರಳು” ಕಥಾ ಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ

Read More

ನಮ್ಮದೇ ಮನೆಯ ಕಥನವೆಂಬಂತೆ ಕಾಡುವ ಕಾದಂಬರಿ

‘ಜೀವಕೊಡಲೇ ಚಹಾ ಕುಡಿಯಲೇ..’ ಎಂಬ ಕಾದಂಬರಿಯು ಮೇಲ್ನೋಟಕ್ಕೆ  ತ್ರಿಕೋನ ಪ್ರೇಮ ಕತೆ  ಅನಿಸಿದರೂ ಇಲ್ಲಿ ಹಲವು ಆಯಾಮಗಳಿವೆ. ಕೊನೆಯವರೆಗೂ, ತನ್ನದೂ ಪ್ರೀತಿಯೇ ಎಂದು ಅರಿಯರಲಾರದೇ ತಲ್ಲಣಗೊಳ್ಳುವ ಹುಡುಗನ ಪಾಡು ಇಲ್ಲಿದೆ.  ಗಾಲಿಬ್ ಕವಿತೆ ಮೂಲಕ ತನ್ನದೇ ಭಾವ ಬೆರೆಸಿ ಶಾಯರಿ ರಚಿಸಿ ಪ್ರೀತಿ ವ್ಯಕ್ತಪಡಿಸುವ ಫಾತಿಮಾ, ಸಲಿಂಗಕಾಮ ಆಯ್ಕೆ ಮಾಡಿಕೊಳ್ಳುವ ದಿಟ್ಟೆ ಚಿತ್ರಾ, ಕೊನೆಗೂ ದಕ್ಕಿದ ಪ್ರೀತಿಯ ಸಾಕ್ಷಾತ್ಕಾರದ ಸನ್ನಿವೇಶಗಳಿವೆ. ಈ ಹಂತದಲ್ಲಿ ಕಾದಂಬರಿಯು  ವಿಭಿನ್ನ ತಿರುವು ಪಡೆದುಕೊಳ್ಳುವುದು.  ಆ ತಿರುವೇನು ಎಂಬುದನ್ನು ಓದುಗರೇ ಕಂಡುಕೊಳ್ಳಬೇಕು. ಕೊಂಕಣಿಯಿಂದ ಕನ್ನಡಕ್ಕೆ ಅನುವಾದಗೊಂಡ ಕಾದಂಬರಿಯ ಕುರಿತು ತಮ್ಮ ಅನಿಸಿಕೆ ಬರೆದಿದ್ದಾರೆ ಜ್ಯೋತಿ ಭಟ್. 

Read More

ಸುಪ್ರೀತ್ ಕೆ.ಎನ್. ಅವರ ‘ಉತ್ತರ’ ಕಾದಂಬರಿಯ ಪುಟಗಳು

ಈ ಬಾರಿಯ ಸಾಕ್ಷಾತ್ಕಾರ ಕಾರ್ಯಕ್ರಮಕ್ಕೆ ಈಗಾಗಲೇ ಅಭ್ಯರ್ಥಿಗಳು ಬಂದಾಗಿದೆ, ಹೊಸದಾಗಿ ಇನ್ಯಾರು ಬರುವುದಿದೆ ಎಂದು ಯೋಚಿಸಿದಾಗ, ಗುರುದೇವರು ಇನ್ನಿಬ್ಬರು ಬರುತ್ತಾರೆ ಎಂದು ಹೇಳಿದ್ದು ನೆನಪಾಯಿತು. ಜಯಕ್ಕನ ಸಮಾಧಿಯಿಂದ ಗುರುದೇವರ ನಿವಾಸಕ್ಕೆ ಮಾತಾಜೀಯವರು ಹೋಗಿ ತಮ್ಮ ಮನಸ್ಸಿನಲ್ಲಿದದ್ದನ್ನು ಹೇಳುವ ಮೊದಲೇ, ‘ದಕ್ಷಿಣ ಕಡೆಯಿಂದ ಒಬ್ಬ ಬರ್ತಾನೆ. ಅವನಿಗೆ ಸಾಧನೆಗಳನ್ನ ಮಾಡಿಸಿ, ಮೌನ ಕಾರ್ಯಕ್ರಮಕ್ಕೆ ತಯಾರು ಮಾಡಬೇಕು. ಅವನ ಬಗ್ಗೆ ನೀವು ವಿಶೇಷವಾಗಿ ಗಮನವಿಡಿ’ ಎಂದು ಹೇಳಿದರು.
ಸುಪ್ರೀತ್ ಕೆ.ಎನ್. ಅವರ ಹೊಸ ಕಾದಂಬರಿ ‘ಉತ್ತರ’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ