Advertisement

Category: ದಿನದ ಪುಸ್ತಕ

ತಾತ್ವಿಕತೆ ನಿರಾಕರಣೆಯ ಮಾಯಾಲೋಕ

ಕುಂಟಿನಿಯ ಕತೆಗಳು ಕೆಲವೊಮ್ಮೆ ಈ ಕಾಲದ್ದಾದರೂ ಅವಧೂತರ ಆಧ್ಯಾತ್ಮಿಕ ವಿಲಾಸವನ್ನು ಹೊತ್ತಿರುತ್ತವೆ; ಜಲಾಲುದ್ದೀನ್‌ ರೂಮಿಯ ಕತೆಗಳನ್ನು, ಸೂಫಿ- ಝೆನ್‌ ಕತೆಗಳನ್ನು ನೆನಪಿಸುತ್ತವೆ. ಕೆಲವೊಮ್ಮೆ ಅತ್ಯಂತ ಪುರಾತನವೆನಿಸುವ ಇಂಥ ಕತೆಗಳಲ್ಲೇ ಹೊಸದೆನಿಸುವ ಕಾಣ್ಕೆಗಳನ್ನು ಕಾಣಿಸಬಲ್ಲ ಆಧುನಿಕ ಮನಸ್ಸೊಂದು ಮಿಡಿಯುತ್ತಿರುತ್ತದೆ. ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ.
ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಪುಸ್ತಕ ‘ಮಾರಾಪು’ ಸಂಕಲನಕ್ಕೆ ಹರೀಶ್‌ ಕೇರ ಬರೆದ ಮುನ್ನುಡಿ

Read More

ಮೊದಲ ಮಹಿಳಾ ಭಾಗವತರ ಆತ್ಮಕಥೆಯ ಒಂದೆರಡು ಪುಟಗಳು

ಪುರುಷರ ಪ್ರಾಬಲ್ಯವೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಮಹಿಳೆಯರು ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರಾಗಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಐದು ದಶಕಗಳ ಹಿಂದೆಯೇ ಲೀಲಾವತಿ ಬೈಪಡಿತ್ತಾಯರು  ಮಹಿಳಾ ಭಾಗವತರಾಗಿ ರಂಗಸ್ಥಳದಲ್ಲಿ ಪಡಿಯೇರಿದ್ದಷ್ಟೇ ಅಲ್ಲದೆ, ಮೇಳದ ತಿರುಗಾಟಕ್ಕೂ ಸೈ ಎಂದವರು. ಯಕ್ಷಗಾನ ಕ್ಷೇತ್ರದ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯರ ಜೀವನ ಕಥನವನ್ನು ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ  ನಿರೂಪಿಸಿದ್ದಾರೆ. ‘ಯಕ್ಷಗಾನ ಲೀಲಾವಳಿ’ ಎಂಬ ಆ ಕೃತಿಯು ಕೇವಲ ಆತ್ಮಕಥೆಯಷ್ಟೇ ಆಗಿರದೆ, ಯಕ್ಷಗಾನದ ಇತರ ಆಯಾಮಗಳನ್ನೂ ತೆರೆದಿಡುವ ಕೃತಿ. ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

Read More

“ಆತ್ಮ ಧ್ಯಾನವೇ ಬುತ್ತಿಯಾದ ಕ್ಷಣ”

ಪುಸ್ತಕ ಕೆಳಗಿಡುವಾಗ ‘ನಾಗೇಶಿ’ ಒಬ್ಬ ಆಪ್ತ ಸಖನಾಗಿ ಎದೆಹೊಕ್ಕಿಬಿಡುತ್ತಾನೆ. ಲೌಕಿಕದ ಬದುಕು ತೋರುವ ವಿಭಿನ್ನ ಮುಖಗಳ ಕರಾಳತೆಯ ದರ್ಶನದೊಂದಿಗೆ ಹೇಗೆ ಅವನ್ನು ಮೆಟ್ಟಿ ನಿಂತು ಅಲೌಕಿಕದತ್ತ ಸಾಗಬೇಕೆಂಬ ಪರಾಮರ್ಶೆಯಿದೆ. ಒಣ ಉಪದೇಶ ಕೊಡುವ ಒಂದೂ ಸಾಲಿರದ, ಆದರೆ ನಮ್ಮೊಳಗೆ ನಾವೇ ಇಳಿದು ತಿದ್ದಿಕೊಳ್ಳಬಹುದಾದ ಒಂದು ಪ್ರಚೋದನೆ ಇಲ್ಲಿದೆ. ಕೊನೆಯಲ್ಲಿ ಬದುಕಿನ ಮಾದರಿ ಹೇಗಿರಬೇಕು ಎಂಬ ಸೂಕ್ಷ್ಮದರ್ಶನಗೈವ ಈ ಗಜಲ್ಲುಗಳು ಖಂಡಿತ ಖುಷಿ ಕೊಡುವ, ಎಲ್ಲ ಬೇಸರದ ಕ್ಷಣಗಳಿಗೂ ಜೊತೆಯಾಗಿ ಜೀವದ್ರವ್ಯ ಸಿಂಪಡಿಸುವ ಸಖರಂತೆ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ.
ನಾಗೇಶ್ ನಾಯಕ ಅವರ “ಆತ್ಮ ಧ್ಯಾನದ ಬುತ್ತಿ” ಗಝಲ್‌ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ಮಿಂಚುಹುಳಗಳ ದೊಂದಿ: ಶಿವಪ್ರಕಾಶರ ಕಾವ್ಯ

ಶಿವಪ್ರಕಾಶರು ತಮ್ಮ ಕವಿತೆಗಳಲ್ಲಿ ನಡೆಸಿರುವ ಭಾಷಿಕ ಪ್ರಯೋಗಗಳು ಅವರನ್ನು ನಿಸ್ಸಂದೇಹವಾಗಿ ಕನ್ನಡದ ವರ್ತಮಾನದ ದೊಡ್ಡಕವಿಯನ್ನಾಗಿ ಮಾಡಿವೆ. ಅನೇಕ ಜನ ಕವಿಗಳು ಒಂದೇ ಬಗೆಯ ಭಾಷಾ ಪ್ರಯೋಗದಸಿದ್ಧ ಏಕತಾನತೆಗೆ ಸಿಕ್ಕಿಕೊಂಡುಬಿಟ್ಟಿರುತ್ತಾರೆ. ವೈವಿಧ್ಯಮಯವಾದ ವಸ್ತುಗಳನ್ನು ಕುರಿತು ಕವಿತೆ ಬರೆಯುತ್ತಿದ್ದರೂ ಅವರ ಕಾವ್ಯಶಿಲ್ಪದ ಕಟ್ಟೋಣದಲ್ಲಿ ಮಾತ್ರ ಏಕರೂಪಕಾತ್ಮಕತೆಯು ಉಳಿದುಬಿಟ್ಟಿರುತ್ತದೆ. ಆದರೆ ಸಮರ್ಥ ಕವಿ ಮಾತ್ರ ಈ ಸಮಸ್ಯೆಯನ್ನುತಮ್ಮ ಭಾಷರೂಢಿಗಳನ್ನು ತಾವೇ ಮುರಿಯುವ ಮೂಲಕ ಮೀರುತ್ತಿರುತ್ತಾರೆ.
ಎಚ್.ಎಸ್. ಶಿವಪ್ರಕಾಶರ ನಾಲ್ಕುದಶಕದ ಕವಿತೆಗಳನ್ನು ಒಟ್ಟಾಗಿ ‘ಹೋಗಿ ಬನ್ನಿ ಋತುಗಳೇ’ ಎಂಬ ಪುಸ್ತಕದಲ್ಲಿ ಕೆ ವೈ ನಾರಾಯಣಸ್ವಾಮಿ ಅವರು ಸಮಗ್ರವಾಗಿ ಸಂಪಾದಿಸಿದ್ದು ಅವರ ಮಾತುಗಳು ಇಲ್ಲಿವೆ.

Read More

ಅಬ್ದುಲ್ ರಶೀದ್ ಕಥಾಸಂಕಲನಕ್ಕೆ ವಿವೇಕ ಶಾನಭಾಗ ಬರೆದ ಮುನ್ನುಡಿ

ಕತೆ ಜರುಗುವ ಆವರಣವು ಅನುಭವದ ಅವಿಭಾಜ್ಯ ಎಂಬುದನ್ನು ಅರಿತು ಅದನ್ನು ಸಹಜ ಸರಾಗತೆಯಲ್ಲಿ ಸಿದ್ಧಿಸಿಕೊಂಡವರು ರಶೀದ್. ಅವರ ಮೊದಲ ಕತೆಯಿಂದಲೂ ಇದನ್ನು ಕಾಣಬಹುದು. ಇಲ್ಲಿಯ ‘ಮೋಹಕ ದ್ವೀಪದ ಮೂಗಿನ ತುದಿ’ ಕತೆಯೊಳಗೆ ಬರುವ ವಿವರಗಳು, ಘಟನೆಗಳು, ಮಾತುಗಳು ಆ ಆವರಣದಲ್ಲಿ ಅಲ್ಲದೇ ಬೇರೆಲ್ಲೂ ಘಟಿಸಲು ಅಸಾಧ್ಯವೆನ್ನುವ ಹಾಗೆ ಸಂಯೋಜನೆಗೊಂಡಿವೆ.
ಕತೆಗಾರ ಅಬ್ದುಲ್‌ ರಶೀದ್‌ ಹೊಸ ಕಥಾ ಸಂಕಲನ “ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್‌ ಎಲಿಜಬೆತ್‌” ಗೆ ವಿವೇಕ ಶಾನಭಾಗ ಬರೆದ ಮಾತುಗಳು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ