ನಮ್ಮಲ್ಲೆ ಅದೆಷ್ಟು ನಂದನದ ತುಣುಕುಗಳು!
ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್, ಚಂದ್ರತಾಲ್, ನಾಕೋ, ಟ್ರೆಕ್ಕಿಂಗ್ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು.
‘ದೇವಸನ್ನಿಧಿ’ ಅಂಕಣದಲ್ಲಿ ತಾವು ಕಂಡ ಸರೋವರಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ
