ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
