ಕಲ್ಪನೆ ವಾಸ್ತವಗಳ ಸಂಕ್ರಮಣದಲ್ಲಿ ಅರಿವಿನ ಅನಾವರಣ
ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.
ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ
ಸಿನಿಲೋಕದಲ್ಲಿ ವಿಹರಿಸುತ್ತಾ….
ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ.
ಎ.ಎನ್. ಪ್ರಸನ್ನರವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನಗಳ ಸಂಕಲನ “ಸಿನಿ ಲೋಕ 21”ಕ್ಕೆ ಗಿರೀಶ್ ಕಾಸರವಳ್ಳಿ ಬರೆದ ಮುನ್ನುಡಿ
ಅನೇಕಾನೇಕ ಹೊಳಹುಗಳು….
ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!
ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ
ಓದುಗರೊಟ್ಟಿಗೆ ಮಾತನಾಡುವ ಕಥೆಗಳು…
ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.
ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ
ಗೋಕುಲದ ನಾಯಕರು ನಾವು….
ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.
ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ
ಎಚ್.ಎಸ್. ಅನುಪಮಾ ಕಾದಂಬರಿಯಲ್ಲಿ “ಅಕ್ಕ”
ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ.
ಡಾ. ಎಚ್.ಎಸ್. ಅನುಪಮಾ ಅವರ ಹೊಸ ಕಾದಂಬರಿ “ಬೆಳಗಿನೊಳಗು” ಕುರಿತು ಡಾ. ಎಲ್.ಸಿ. ಸುಮಿತ್ರಾ ಬರಹ
ಕನಸು ಸಾಕಿಕೊಂಡವರ ಕಣ್ಣ ದೀಪದೆದುರು…
ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.
ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ
ನಿಷೇಧಿತ ಗಿರಿ ನೆತ್ತಿಯಲ್ಲಿ
ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!
ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ
ಗಾಂಧೀಜಿ ಬದುಕಿನ ಹರಿವುಗಳ ಒಳಾರ್ಥವನ್ನು ತೆರೆದಿಟ್ಟ ಕೃತಿ
ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು.
ರಾಮಚಂದ್ರ ಹಬ್ಬು ಅನುವಾದಿಸಿರುವ “ಮಹಾತ್ಮ ಗಾಂಧಿ ಜೀವನ ಚರಿತೆ” ಕೃತಿಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ









