ಅಪ್ಪ ಇಲ್ಲವಾಗಿ…
ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ.
ದರ್ಶನ್ ಜಯಣ್ಣ ಬರೆದ ಪ್ರಬಂಧಗಳ ಸಂಕಲನ “ಅಪ್ಪನ ರ್ಯಾಲೀಸ್ ಸೈಕಲ್” ನಿಂದ ಒಂದು ಪ್ರಬಂಧ
ನೆನಪಾಗಿ ಉಳಿದ ಟ್ರೂತನ್
ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!
ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ
ಎಲ್ಲಾ ಊರು ಕಂಡಮೇಲೆ….
ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.
ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯೂರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್ ಕುಮಾರ್ ಬರಹ
ಇಷ್ಟುಕಾಲ ಒಟ್ಟಿಗಿದ್ದು….
ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?
ಎನ್. ಸಂಧ್ಯಾ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ
ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ
ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ.
ಪೂರ್ಣಿಮಾ ಮಾಳಗಿಮನಿ ಬರೆದ “ಡೂಡಲ್ ಕಥೆಗಳು” ಕೃತಿಗೆ ಗೋಪಾಲ ಕೃಷ್ಣ ಕುಂಟಿನಿ ಬರೆದ ಮುನ್ನುಡಿ
ಬೇರು ಮತ್ತು ಬಿಳಲು…
ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.
ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ
ಕಾಣ್ಕೆ ನೀಡುವ ಕವಿತೆಗಳು…
ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.
ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನಕ್ಕೆ ಡಾ.ಲೋಕೇಶ್ ಅಗಸನಕಟ್ಟೆ ಬರೆದ ಮುನ್ನುಡಿ
ಸಿನೆಮಾ ಜಗತ್ತಿನ ಒಳಹೊರಗು…
ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ
ಝೇಂಕರಿಸುತ್ತಲೇ ಸಮಾಜದ ವಿಕಾರತೆ ಬಯಲುಗೊಳಿಸುವ ಹನಿಗಳು
ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.
ಪ್ರಕಾಶ್ ಎಸ್ ಮನ್ನಂಗಿ ಬರೆದ “ನೂರೊಂದು ಝೇಂಕಾರ” ಹನಿಗವನಗಳ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್ ಕುಮಾರ್ ಲೇಖನ









