ಆಂತರ್ಯದ ಬೆಳಗಿನಿಂದ ಹೊರಹೊಮ್ಮಿದ ಭಾವ ಕಿರಣ..
ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ.
ಶಿವನಗೌಡ ಪೊಲೀಸ್ ಪಾಟೀಲ್ ಅವರ ಕವನ ಸಂಕಲನಕ್ಕೆ ಶರಣಬಸಪ್ಪ ಬಿಳೆಯಲಿ ಬರೆದ ಮುನ್ನುಡಿ
ವ್ಯಾಸರಾವ್ ನಿಂಜೂರ್ ಆತ್ಮಕಥನದ ಪುಟಗಳು
ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು.
ವ್ಯಾಸರಾವ್ ನಿಂಜೂರ್ ಅವರ ಆತ್ಮಕಥನ “ಎಳೆದ ತೇರು” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ದೇವರ ಅಸ್ತಿತ್ವವನ್ನು ಹುಡುಕಾಡುವ ಕಥನ
ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದಂತೆ ಗೋಚರಿಸುತ್ತದೆ. ಡಾ. ನಾ. ಮೊಗಸಾಲೆಯವರ ‘ಇದ್ದೂ ಇಲ್ಲದ್ದುʼ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರೆದ ಬರಹ ಇಲ್ಲಿದೆ.
`ಮಣಿಬಾಲೆʼ ಕೃತಿಯ ಒಂದೆರಡು ಪುಟಗಳು
ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ
ಸಂತೆಯೊಳಗಣ ಮೌನಕ್ಕೆ ಶರಣಾಗುತ್ತ…
ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ.
ಚನ್ನಬಸಪ್ಪ ಆಸ್ಪರಿಯವರ “ಸಂತೆಯೊಳಗಣ ಮೌನ” ಕವನ ಸಂಕಲನದ ಕುರಿತು ನಾದ ಮಣಿನಾಲ್ಕೂರು ಬರಹ
ಇರುವಿಕೆ ಮತ್ತು ಆಗುವಿಕೆ
ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ
ಬಾಳಿನ ಸಂತೆಯಲ್ಲಿ ಗಜಲ್ ಧ್ಯಾನ..
ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ
ಇವಾನ್ ಬುನಿನ್: ಭೌತ ವಸ್ತುಗಳ ಭಾವಗೀತಕಾರ
ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು…
ರಷ್ಯಾದ ಹೆಸರಾಂತ ಲೇಖಕ ಇವಾನ್ ಬುನಿನ್ನ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದದ್ದು, ಈ ಸಂಕಲನಕ್ಕೆ ಬುನಿನ್ ಕುರಿತಾಗಿ ಬರೆದ ಅವರ ಮಾತುಗಳು ಇಲ್ಲಿವೆ
ಕೃಷ್ಣ ಸಾಕ್ಷಾತ್ಕಾರ ಮಾಡಿಸುವ ಅಪರೂಪದ ಖಂಡಕಾವ್ಯ
ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ.
ಪ್ರೊ. ಕೆ.ಇ. ರಾಧಾಕೃಷ್ಣ ಅವರ “ಗೋಪಿಕೋನ್ಮಾದ” ಕೃತಿಯ ಕುರಿತು ನಾರಾಯಣ ಯಾಜಿ ಬರಹ









