ಮೊಣಕಾಲುಂಗರ, ತುತ್ತಿಗೆ ಸುತ್ತಿಗೆ
ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ.
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಮತ್ತೊಂದು ಅಧ್ಯಾಯ ಇಂದಿನ ಓದಿಗೆ.
ಕರಣಂ ಪವನ್ ಪ್ರಸಾದ್ ಹೊಸ ಕಾದಂಬರಿಯ ಪುಟಗಳು
ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ, ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು. ಕರಣಂ ಪವನ್ ಪ್ರಸಾದ್ ಬರೆದ ‘ಸತ್ತು’ ಎಂಬ ಹೊಸ ಕಾದಂಬರಿಯಿಂದ ಕೆಲವು ಪುಟಗಳು ನಿಮ್ಮ ಓದಿಗೆ
ಆನೆಗಳಿಗಾಗಿ ಕಾಡಿನಲ್ಲಿ ಮೇವು ಬೆಳೆದರೇ..
ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು.
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಬರಹ ಇಲ್ಲಿದೆ.
ಬದುಕಿನ ವಿನ್ಯಾಸಗಳ ಬಗ್ಗೆ ಓದುಗರನ್ನು ಒಪ್ಪಿಸುವ ಕತೆಗಳು
ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ.
ಆನಂದ್ ಗೋಪಾಲ್ ಹೊಸ ಕಥಾಸಂಕಲನ “ಆಟಗಾಯಿ”ಗೆ ಕೆ. ಸತ್ಯನಾರಾಯಣ ಬರೆದ ಮುನ್ನುಡಿ
ಕೊಳ್ಳೆಗಾಲ್ ಮೆಮೋರಿಯಲ್
ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಯುದ್ಧದಲ್ಲಿ ಮಡಿದವರಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ ಸ್ಮಾರಕಗಳಿಗೆ ಕೊಳ್ಳೇಗಾಲದ ‘ವೆರಿಸ್ಪೆಷಲ್’ ಕಲ್ಲುಚಪ್ಪಡಿಗಳನ್ನು ಅಂದರೆ ಗ್ರಾನೈಟನ್ನು ಬಳಸಲಾಗಿದೆ. ಈ ಕಲ್ಲುಚಪ್ಪಡಿಗಳನ್ನು ರೂಪಿಸಲು ಜೀವತೆತ್ತವರಿಗೆ ಸ್ಮಾರಕ ಬೇಡವೇ…
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಒಂದು ಅಧ್ಯಾಯ ಇಂದಿನ ಓದಿಗೆ.
ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ
ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಇನ್ನೊಂದು ಪ್ರಬಂಧ ಇಲ್ಲಿದೆ.
ನಾನೂ ವಿದ್ಯುತ್ ತಯಾರಿಸಿದೆ!
ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ. ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಂದು ಯೋಚಿಸುವಾಗ ವಿದ್ಯುತ್ ತಯಾರಿಸುವ ಯೋಚನೆ ಮನಸ್ಸಿಗೆ ಬಂತು. ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಪ್ರಬಂಧ ಇಲ್ಲಿದೆ.
ಅಕ್ಷರಗಳು ಅನಾವರಣಗೊಳಿಸುವ ಸತ್ಯ
ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.
ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ







