Advertisement

Category: ದಿನದ ಪುಸ್ತಕ

ಡುಂಡಿರಾಜ್ ಪುಸ್ತಕದ ಹನಿಗಳ ಕಂಪು

‘ಹನಿಗವನ ಅಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿನುಡಿ’ ಎಂಬ ಸಾಲುಗಳಂತೆ  ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‍ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ.  ಏನೇ ಆಗಲಿ, ಆಕಾರ ಸಾಧ್ಯವಾದಷ್ಟು ಚಿಕ್ಕದಾಗಿರುವುದು ಮುಖ್ಯ. ಚುಟುಕು ಕವಿ ಡುಂಡಿರಾಜ್‌ ಬರೆದ “ಹನಿಗವನ; ಏನು? ಏಕೆ? ಹೇಗೆ?” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಎ.ಎನ್.‌ ಪ್ರಸನ್ನ “ಅಲೆಗಳು” ಕಾದಂಬರಿಗೆ ಎಂ. ಎಸ್ . ಆಶಾದೇವಿ ಮುನ್ನುಡಿ

ಇಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ.
ಎ.ಎನ್. ಪ್ರಸನ್ನ ಹೊಸ ಕಾದಂಬರಿ “ಅಲೆಗಳು” ಗೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

Read More

ಎಂಬತ್ತರ ದಶಕದ ಮಹತ್ವದ ಸಾಹಿತ್ಯ

ವಿಮರ್ಶಾ ಕ್ಷೇತ್ರದಲ್ಲಿ ಕಣ್ಣನ್ನು ಸೆಳೆಯುವಂತಹ ಬೆಳವಣಿಗೆ ಆಗಿದೆ. ಸೃಜನಶೀಲ ಸಾಹಿತ್ಯದ ಹಿಂದೆಯೂ ಪ್ರಜ್ಞಾಪೂರ್ವಕ ಚಿಂತನೆ ಇರುವುದು ಅನಿವಾರ್ಯವಾದ ಯುಗದಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಷ್ಟೂ ಸೃಜನಶೀಲ ಸಾಹಿತ್ಯಕ್ಕೂ ಲಾಭ. ಜಿ.ಎಚ್. ನಾಯಕ, ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚನ್ನಿ, ಡಿ.ಆರ್. ನಾಗರಾಜ ಮೊದಲಾದವರ ವಿಮರ್ಶೆಯ ಬರಹಗಳನ್ನು ಓದಿದಾಗ ವಿಮರ್ಶೆಯ ಉಪಕರಣಗಳು ಎಷ್ಟು ಸೂಕ್ಷ್ಮವಾಗಿವೆ ಎನ್ನುವುದು ಸಂತೋಷವನ್ನುಂಟು ಮಾಡುತ್ತದೆ. ಹಲವೊಮ್ಮೆ ಈ ವಿಶ್ಲೇಷಣೆಯಲ್ಲಿ ಬೌದ್ಧಿಕ ಅಂಶ ತಾನೇತಾನಾಗಿ, ರಸಾ ಸ್ವಾದನೆ ಹಿಂದುಳಿಯುತ್ತಿದೆಯೋ ಎಂದು ಆತಂಕವಾಗುತ್ತದೆ.
ಪ್ರೊ. ಎಲ್.ಎಸ್. ಶೇಷಗಿರಿರಾವ್ ಬರೆದ “ಆಧುನಿಕ ಕನ್ನಡ ಸಾಹಿತ್ಯ” ಕೃತಿಯಿಂದ ಒಂದು ಲೇಖನ ನಿಮ್ಮ ಓದಿಗೆ

Read More

ಎಂದಿಗೂ ಸಲ್ಲುವ ಕನಸಿನ ನೆಲೆ-ಹಿನ್ನೆಲೆ

ಈ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ.
ಶತಾವಧಾನಿ ಡಾ. ಗಣೇಶ್‌ ಬರೆದ “ಮಣ್ಣಿನ ಕನಸು” ಕಾದಂಬರಿಯ ಕುರಿತು ನೀಲಕಂಠ ಕುಲಕರ್ಣಿ ಲೇಖನ

Read More

“ಕಾನನ ಜನಾರ್ದನ” ಕಾದಂಬರಿಯ ಒಂದೆರಡು ಪುಟಗಳು

ಹತ್ತು ದಿನಗಳಿಂದ ಅವರು ಹೆಚ್ಚು ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ನಮ್ಮದೇ ರೀತಿಯಲ್ಲಿ ಅವಲೋಕಿಸುತ್ತಿದ್ದೆವು. ನಮಗೆ ಇಬ್ಬರು ಮಾತ್ರವೆ ಕೆ. ನಾಗಯ್ಯ ಅವರ ಈಗಿನ ಸ್ಥಿತಿಗೆ ಸಂಬಂಧ ಹೊಂದಿರಲು ಸಾಧ್ಯ ಎಂಬ ಸಂಶಯ ಮೂಡಿತು. ಇಬ್ಬರೂ ಕೂಡ ಇತ್ತೀಚೆಗೆ ಅವರು ತೊಡಗಿಸಿಕೊಂಡಿದ್ದ ಚಟುವಟಿಕೆಗೆ ಸಂಬಂಧ ಪಟ್ಟವರು: ಒಬ್ಬರು ನಾಗಯ್ಯ ಇತ್ತೀಚೆಗೆ ಬರೆದ ಕಾದಂಬರಿಯ ಪ್ರಕಾಶಕರು.
ಡಾ. ಕೆ. ಎನ್. ಗಣೇಶಯ್ಯ ಬರೆದ “ಕಾನನ ಜನಾರ್ದನ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ